ಕನ್ನಡ ವಾರ್ತೆಗಳು

ಉಳ್ಳಾಲ : ಐದು ಮಂದಿಯ ತಂಡದಿಂದ ಯುವಕನಿಗೆ ಹಲ್ಲೆ – ಚೂರಿ ಇರಿತ

Pinterest LinkedIn Tumblr

ಉಳ್ಳಾಲ, ಮೇ 14: ಉಳ್ಳಾಲ ದರ್ಗಾ ಬಳಿ ನಾಲ್ಕೈದು ಮಂದಿಯ ತಂಡವೊಂದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಚೂರಿ ಇರಿತಕ್ಕೊಳಗಾದ ಯುವಕನನ್ನು ಉಳ್ಳಾಲ ಸಮೀಪದ ಅಳೇಕಲದ ನಿವಾಸಿ ಶಂಸುದ್ದೀನ್ (27) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಜಲ್ದಿ ಸಿದ್ದೀಕ್, ಖಬುರ್ ಆಸಿಫ್ ಎಂಬವರು ಮಂದಿಯ ತಂಡದ ಜೊತೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚಿಗೆ ಅಧ್ಯಕ್ಷರ ಅಯ್ಕೆ ವಿಚಾರದಲ್ಲಿ ವಿವಾದಕ್ಕೊಳಗಾದ ದರ್ಗಾವೊಂದರ ಕಾರ್ಯಕ್ರಮದ ನೋಟಿಸ್ ಹಂಚುವ ವಿಚಾರದಲ್ಲಿ ನಿನ್ನೆ ಮಧ್ಯಾಹ್ನ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದ್ದು, ಇದೇ ವಿಚಾರದಲ್ಲಿ ಸಂಜೆ ಅಸರ್ ನಮಾಝಿನ ಬಳಿಕ ದರ್ಗಾದ ಹೊರಗೆ ಐದಾರು ಮಂದಿಯ ತಂಡ ಶಂಸುದ್ದೀನ್‌ರನ್ನು ತಡೆದು ಕೈ, ಕಾಲುಗಳಿಂದ ಹೊಡೆದು ಹಲ್ಲೆ ನಡೆಸಿದ್ದು, ತೋಳಿನ ಭಾಗಕ್ಕೆ ಚೂರಿಯಿಂದ ಇರಿದಿದೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಶಂಸುದ್ದೀನ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. .ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Write A Comment