ಮಂಗಳೂರು/ಕೊಣಾಜೆ,ಮೇ.17: ಸೌದಿ ಅರೇಬಿಯಾದ ಖಸಿಂ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಮೊಂಟೆಪದವು ನಿವಾಸಿಗಳಾದ ತಾಯಿ ಮತ್ತು ಮಗ ದಾರುಣಾವಾಗಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಮೊಂಟೆಪದವು ನಿವಾಸಿಗಳಾದ ಖತೀಜಮ್ಮ (50) ಮತ್ತು ಅವರ ಪುತ್ರ ಅಬ್ಟಾಸ್ (29) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಸೌದಿ ಆರೇಬಿಯಾದ ಜುಬೈಲ್‌ನಲ್ಲಿ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ಟಾಸ್ ಕಳೆದ ನವೆಂಬರ್‌ನಲ್ಲಿ ವಿವಾಹವಾಗಿದ್ದು, ವಿಸಿಟಿಂಗ್ ವೀಸಾದಲ್ಲಿ ಪತ್ನಿ, ಹಾಗೂ ತಂದೆ ತಾಯಿಯನ್ನು ಸೌದಿ ಆರೇಬಿಯಾ ಉಮ್ರಾಕ್ಕೆ ಕರೆದುಕೊಂಡು ಹೋಗುವ ಕನಸನ್ನು ಹೊತ್ತುಕೊಂಡಿದದ್ದು, ಉಮ್ರಾ ಮುಗಿಸಿ ವಾಪಸ್ ಬರುತ್ತಿದ್ದಾಗ ಮದೀನದ ಖಸಿಂ ಎಂಬಲ್ಲಿ ಈ ಅಪಘಾತವು ಸಂಭವಿಸಿದೆ.
ಅಫಘಾತದಲ್ಲಿ ಖತೀಜಮ್ಮ ಅವರ ಪತಿ ಮಹಮ್ಮದ್(60) ಹಾಗೂ ಅಬ್ಟಾಸ್ ಅವರ ಪತ್ನಿ ಮೈನಾಝ್ (20) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. .
ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಅಬ್ಟಾಸ್ ಅವರು ಇಬ್ಬರು ಸಹೋದರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ.