ಗಲ್ಫ್

ಬಹರೈನ್: ಹೊಸ ವೀಸಾ ನೀತಿ ಭಾರತೀಯರಿಗೆ ಸುಲಭ ಪ್ರವೇಶ

Pinterest LinkedIn Tumblr

visa

ಮನಾಮ, ಸೆ.21: ಸುಮಾರು 3 ಲಕ್ಷಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಹೊಂದಿರುವ ಬಹರೈನ್ ಹೊಸ ವೀಸಾ ನೀತಿಯನ್ನು ಪ್ರಕಟಿಸಿದ್ದು, ಇದರಿಂದ ಭಾರತೀಯ ಪ್ರಜೆಗಳು ಸುಲಭವಾಗಿ ಬಹರೈನ್‌ಗೆ ಪ್ರಯಾಣಿಸಲು ಅವಕಾಶ ದೊರೆಯಲಿದೆ.

ಹೊಸ ವೀಸಾ ನೀತಿಯ ಪ್ರಕಾರ 2014ರ ಅಕ್ಟೋಬರ್ ವೇಳೆಗೆ ಭಾರತ ಸೇರಿದಂತೆ ಇತರ 35 ರಾಷ್ಟ್ರಗಳ ನಾಗರಿಕರಿಗೆ ಇ-ವೀಸಾಗಳಿಗೆ ಅರ್ಜಿಸಲ್ಲಿಸಲು ಸಾಧ್ಯವಾಗಲಿದೆ. ಇದರಿಂದ ಬಹರೈನ್‌ನಿಂದ ಇ-ವೀಸಾ ಪಡೆಯುವ ಅರ್ಹ ರಾಷ್ಟ್ರಗಳ ಸಂಖ್ಯೆಯು 101ಕ್ಕೆ ಏರಲಿದೆ. ಈ ವೀಸಾಗಳನ್ನು ಬಹರೈನ್‌ಗೆ ಪ್ರಯಾಣಿಸುವ ಮುಂಚೆ ಸರಳ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಮೂಲಕ ಪಡೆದುಕೊಳ್ಳಬಹುದಾಗಿದೆ. 2015ರಿಂದ ಮೊದಲ್ಗೊಂಡು ಇನ್ನು ಮುಂದೆ ಬಹರೈನ್‌ನಲ್ಲಿ ಭಾರತೀಯ ಪ್ರವಾಸಿಗರು ಹೆಚ್ಚಿನ ಅವಧಿ ತಂಗಲು ಸಾಧ್ಯವಾಗಲಿದೆ. ಹೊಸ ವ್ಯವಸ್ಥೆಯ ಪ್ರಕಾರ ವೀಸಾಗಳ ಅವಧಿಯು ಒಂದು ತಿಂಗಳು ಆಗಿದ್ದು, ಅವುಗಳನ್ನು ಮೂರು ತಿಂಗಳಿಗೆ ನವೀಕರಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಬಹು ಪ್ರವೇಶ ವೀಸಾಗಳು ಕೂಡಾ ಲಭ್ಯವಾಗಲಿವೆ.

ಬಹುದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಬಹರೈನ್‌ನಲ್ಲಿ ನೆಲೆಸಿರುವುದರಿಂದ ಹೊಸ ವೀಸಾ ನೀತಿಯು ವಿಶೇಷವಾಗಿ ಅವರ ಮೇಲೆ ಮಹತ್ವದ ಪರಿಣಾಮ ಉಂಟಾಗಲಿದೆ. ಬಹರೈನ್‌ನಲ್ಲಿರುವ ವಿದೇಶೀಯರ ಸಂಖ್ಯೆಯಲ್ಲಿ ಬಹುದೊಡ್ಡ ಪಾಲು ಭಾರತೀಯರದ್ದಾಗಿದೆ. ಬಹರೈನ್‌ನೊಂದಿಗಿನ ಪ್ರಮುಖ ವ್ಯಾಪಾರ ಪಾಲುದಾರಿಕೆ ರಾಷ್ಟ್ರಗಳಲ್ಲೂ ಭಾರತ ಒಂದಾಗಿದೆ. 2011ರಲ್ಲಿ ಭಾರತ ಹಾಗೂ ಬಹರೈನ್ ನಡುವಿನ ಒಟ್ಟು ವಹಿವಾಟು 1.7 ಶತಕೋಟಿ ಡಾಲರ್ ಮೀರಿತ್ತು.

Write A Comment