ಜಿದ್ದಾ: ಹಜ್ಜ್ ಸಮಯದಲ್ಲಿ ಐ.ಎಫ್.ಎಫ್ ಕಾರ್ಯಕರ್ತರ ಮೀಸಲಾದ ಮತ್ತು ಸಕಾಲಿಕ ಸೇವೆಯು ಪ್ರಚಂಡವಾಗಿತ್ತು. ಪ್ರಪಂಚದ ನಾನಾ ಭಾಗಗಳಿಂದ ಬಂದ ಯಾತ್ರಾರ್ಥಿಗಳಿಗೆ ಈ ಸೇವೆಯು ಅತ್ಯಂತ ಅಮೂಲ್ಯ ಮತ್ತು ಲಾಭದಾಯಕವಾಗಿತ್ತು. ಹಲವಾರು ಜನರು ಅನುಸರಿಸಲು ನಿಜವಾಗಿಯೂ ಇದೊಂದು ಪ್ರೇರಣೆಯಾಗಿದೆ ಎಂದು ಶ್ರೀ.ಶರೀಫ್ ಅಲ್ ಫದಲ್ ಹೇಳಿದರು.
ಅಲ್ ಫದಲ್ ಇಂಟರ್ ನ್ಯಾಶನಲ್ ಸ್ಕೂಲ್ ಮಕ್ಕಾ ಇದರ ಶಿಕ್ಷಣ ತಜ್ನ ಮತ್ತು ನಿರ್ದೇಶಕರಾದಂತಹ ಶ್ರೀ.ಎಸ್.ಆರ್ ಶರೀಫ್ ಅಲ್ ಫದಲ್ ರವರು ಇಂಡಿಯಾ ಫೆಟರ್ನಿಟಿ ಫಾರಂ ಮಕ್ಕಾ ಘಟಕವು ಹಜ್ಜ್ ಸ್ವಯಂ ಸೇವಕರಿಗೆ ಆಯೋಜಿಸಿದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಐ.ಎಫ್.ಎಫ್ ಜಿದ್ದಾ ವಲಯದ ಅದ್ಯಕ್ಷರಾದಂತಹ ಅಬ್ದುಲ್ಲ ಕೋಯನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅವರು ಸಂಘಟನೆಯು ಹಜ್ಜ್ ಸೇವೆಯನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿಯಾದಂತಹ ಭಾರತೀಯ ಹಜ್ಜ್ ಮಿಷನ್ ಮತ್ತು ಅದರ ಸಂಯೋಜಕರು ಮತ್ತು ಸ್ವಯಂ ಸೇವಕರ ಪ್ರಚಂಡ ಬೆಂಬಲ ಮತ್ತು ವಿಸ್ತಾರ ಹ್ರದಯದ ಸಹಕಾರಕ್ಕೆ ಕ್ರತಜ್ನತೆ ಸಲ್ಲಿಸಿದರು. ಭಾರತೀಯ ಹಜ್ಜ್ ಯಾತ್ರಾರ್ಥಿಗಳ ಮೊದಲ ತಂಡವು ಆಗಮಿಸಿದಂದಿನಿಂದ ದುರ್ಬಲ ಮತ್ತು ಅನಾರೋಗ್ಯ ಪೀಡಿತ ಯಾತ್ರಾರ್ಥಿಗಳು ಅಝೀಝಿಯಾದ ತಮ್ಮ ಕಟ್ಟಡವನ್ನು ಸೇರಲು ಮತ್ತು ಹಜ್ಜ್ ಕಮಿಟಿಯ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಮತ್ತು ವೈದ್ಯಕೀಯ ಸಲಹೆಗಳನ್ನು ಒದಗಿಸಲು ಐ.ಎಫ್.ಎಫ್ ಸಂಘಟನೆಯು ಭಾರತೀಯ ಹಜ್ಜ್ ಕಮಿಟಿಯ ಜೊತೆಗೂಡಿ ಕೆಲಸ ಮಾಡಿದೆ ಎಂದರು.
ತವಫಾ ಸಂಘಟನೆಯ ಅಧ್ಯಕ್ಷರಾದಂತಹ ಶ್ರೀ.ನಜೀಬ್ ಅಬ್ದುಲ್ ಹಮೀದ್ ಖಾನ್ ರವರು ಸಮರ್ಪಣೆ ವ್ಯಕ್ತಪಡಿಸುತ್ತಾ ಐ.ಎಫ್.ಎಫ್ ನ ಸ್ವಯಂ ಸೇವಕರು ತನ್ನ ಹಜ್ಜ್ ಕ್ಯಾಂಪ್ ನಲ್ಲಿದ್ದ ಯಾತ್ರಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಮತ್ತು ಅವರಿಗೆ ಅರ್ಥವಾಗಲು ಬಳಸಿದ ಭಾಷಾನುವಾದಗಳಿಂದ ನಾನು ಪ್ರಭಾವಿತಗೊಂಡಿದ್ದೆ ಎಂದರು.ಅವರು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಹಕಾರದ ಭರವಸೆ ವ್ಯಕ್ತಪಡಿಸಿದರು.ಡಾ.ನಝೀರ್ ಅಹ್ಮದ್ ಅಕ್ಬರ್ ಖಾನ್ (ಐ.ಪಿ.ಡಬ್ಲ್ಯು.ಎಫ್ ಮಕ್ಕಾ) ಅಬ್ದುಲ್ ಗಪ್ಪಾರ್ ಮಕ್ಕಾ (ಐ.ಎಫ್.ಎಫ್),ಸುಲೈಮಾನ್ ಸಿ.ಟಿ.(ನಿರ್ದೇಶಕರು ಎ.ಸಿ.ಸಿ.ಇ.ಎಸ್.ಎಸ್),ಮಹಮ್ಮದ್ ಮುನೀಸ್ ಖಾನ್ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಝಿ ಅಹ್ಮದ್ ರವರು ಕುರಾನಿನ ಕಿರಾಹತ್ ಪಠಿಸುವುದರೊಂದಿಗೆ ಕಾರ್ಯಕ್ರಮವನ್ನು ಫ್ರಾರಂಬಿಸಿದರು ಮತ್ತು ಇ.ಎಮ್. ಅಬ್ದುಲ್ಲ ಅಥಿತಿಗಳನ್ನು ಸ್ವಾಗತಿಸಿದರು.ಅಧ್ಯಕ್ಷರಾದ ಅಬ್ದುಲ್ಲಾ ಕೋಯ ವಂದಿಸಿದರು.ರುಚಿಕರವಾದ ಊಟದ ವ್ಯವಸ್ಥೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಅಬ್ದುಲ್ ಗಪ್ಪಾರ್,ಅಶ್ರಫ್ ಇರಿಟ್ಟಿ,ಅಬ್ದುಸ್ಸಲಾಂ ಮಿರ್ಝಾ,ಅಶ್ರಫ್ ತಿರೂರ್ ರಂತಹರನ್ನೊಳಗೊಂಡ ಅನುಭವಿ ತಂಡ ಕಾರ್ಯಕ್ರಮದ ಯಶಸ್ವಿಗಾಗಿ ಅವಿರತವಾಗಿ ಶ್ರಮವಹಿಸಿತ್ತು.