ಗಲ್ಫ್

ಮುತ್ತುಗಳ ದ್ವೀಪದಲ್ಲ್ಲಿಗಂಧದ ಗುಡಿಯ ಸೌರಭ; ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ನ್ರತ್ಯ ; ವಿಶೇಷ ಆಕರ್ಷಣೆ -ಪ್ರೇಂ-ರವಿಶಂಕರ್

Pinterest LinkedIn Tumblr

flyer

ಬಹರೈನ್: ನಮ್ಮ ಕನ್ನಡ ಬಹರೈನ್ ನ ಸಂಗೀತ ಸಂಜೆಗೆ ಮೂರರ ಸಂತಸವಾದರೆ ಇಲ್ಲಿನ ಪ್ರತಿಷ್ಟಿತ ಇಂಡಿಯನ್ ಕ್ಲಬ್ಬಿಗೆ ನೂರರ ಸಂಭ್ರಮ . ಈ ಮೂರು ಮತ್ತು ನೂರರ ಸಂತೋಷವನ್ನು ಒಂದಾಗಿ ಹಂಚಿಕೊಳ್ಳಲು ದ್ವೀಪದ ಕನ್ನಡಿಗರಿಗೆ ಇಲ್ಲಿನ ಇಂಡಿಯನ್ ಕ್ಲಬ್ ನಮ್ಮ ಕನ್ನಡ ಬಹರೈನ್ ನ ಸಹಯೋಗದೊಂದಿಗೆ ಬ್ರಹತ್ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದೆ .

ಇದೇ ನವೆಂಬರ್ ತಿಂಗಳ 21ನೇ ತಾರೀಖಿನ ಶುಕ್ರವಾರ ಸ೦ಜೆ 5 : 30 ಗ೦ಟೆಗೆ ಸರಿಯಾಗಿ ಈ ರಸಮಂಜರಿ ಕಾರ್ಯಕ್ರಮವು ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಕ್ರೀಡಾಂಗಣದಲ್ಲಿ ಜರುಗಲಿದ್ದು ನಾಡಿನ ಹೆಸರಾಂತ ಕಲಾವಿದರುಗಳು ಕಲಾ ಪ್ರದರ್ಶನ ನೀಡಲಿದ್ದಾರೆ.

ಕನ್ನಡ ಚಲನಚಿತ್ರ ರ೦ಗದ ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಹಿನ್ನಲೆ ಗಾಯಕ ರಮೇಶ್ಚಂದ್ರ , ಖ್ಯಾತ ಹಿನ್ನೆಲೆ ಗಾಯಕಿ ಸಿಂಚನ್ ದೀಕ್ಷಿತ್ , ಮಿಮಿಕ್ರಿ ಪಟು,ನಟ , ಹಾಸ್ಯದ ಮಲ್ಲ ಮಿಮಿಕ್ರಿ ದಯಾನಂದ್ರವರು ಕನ್ನಡ, ಹಿ೦ದಿ, ತುಳು, ಕೊ೦ಕಣಿ ಹಾಡುಗಳು ಹಾಗು ಹಾಸ್ಯಕಾರ್ಯಕ್ರಮದೊಂದಿಗೆ ಸುಮಾರು ನಾಲ್ಕು ಗ೦ಟೆ ಗಳ ಕಾಲ ದ್ವೀಪದ ಕಲಾ ಪ್ರೇಮಿಗಳನ್ನು ರಂಜಿಸಲಿದ್ದಾರೆ.ದ್ವೀಪದ ಖ್ಯಾತ ನ್ರತ್ಯ ತಂಡವಾದ ಸಿ .ಎನ್ ಕ್ರಿಯೇಶನ್ ನ ನ್ರತ್ಯ ಪಟುಗಳಿಂದ ವೈವಿಧ್ಯಮಯವಾದ ನ್ರತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ.

ಕನ್ನಡ ಚಲನ ಚಿತ್ರರಂಗದ ಬಹುಬೇಡಿಕೆಯ ನಟ “ನೆನಪಿರಲಿ ” ಖ್ಯಾತಿಯ ಪ್ರಶಸ್ತಿ ವಿಜೇತ ನಾಯಕ ನಟ ಲವ್ಲೀ ಸ್ಟಾರ್ ಪ್ರೇಂ ,”ಸಿಲ್ಲಿ ಲಲ್ಲಿ ” ಖ್ಯಾತಿಯ ನಟ ,ಗಾಯಕ ರವಿಶಂಕರ್ ರವರು ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡು ಹಾಡಿ ಕುಣಿದು ಅಭಿಮಾನಿಗಳನ್ನು ರಂಜಿಸಲಿರುವರು .

Kamal

ದ್ವೀಪದ ಕನ್ನಡಿಗರಿಗೆ ಹಳೆಯ ಸುಮಧುರ ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳುವ ಒಂದು ಸುವರ್ಣಾವಕಾಶ ಇದಾಗಿದ್ದು ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ .

ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಶ್ರೀ ಕಮಾಲಾಕ್ಷ ಅಮೀನ್‌ರವರನ್ನು ದೂರವಾಣಿ ಸ೦ಖ್ಯೆ 33109331,ಶ್ರೀ ಆಸ್ಟಿನ್ ಸ೦ತೋಷ್ ಕುಮಾರ್‌ ದೂರವಾಣಿ ಸ೦ಖ್ಯೆ 39837771 ,ಶ್ರೀ ವಿಜಯ್ ಬ್ರಹ್ಮ್ಮಾವರ್ ರವರನ್ನು ದೂರವಾಣಿ ಸಂಖ್ಯೆ 39295991 ಹಾಗು ಶ್ರೀಮತಿ ಚಂದ್ರಕಲಾ ಮೋಹನ್ ರವರನ್ನು ದೂರವಾಣಿ ಸಂಖ್ಯೆ 38833296 ಮುಖೇನ ಸಂಪರ್ಕಿಸಬಹುದು .

ವರದಿ-ಕಮಲಾಕ್ಷ ಅಮೀನ್

Write A Comment