ಗಲ್ಫ್

ಕುವೈಟ್: “ ಅಂತರಾಷ್ಟ್ರೀಯ ಮೀಲಾದ್ ಸಮಾವೇಶದ ಪ್ರಚಾರ ಸಭೆ”

Pinterest LinkedIn Tumblr

Kuwait programe-Nov 29_2014_010

ಕುವೈಟ್: ಕೆ.ಸಿ.ಎಫ್.ಕುವೈಟ್ ಇದರ ವತಿಯಿಂದ ಶುಕ್ರವಾರ ದಿನಾಂಕ 28/11/2014 ರ ಇಶಾ ನಮಾಝಿನ ನಂತರ ಸೂಕ್ ಸಭಾದಲ್ಲಿರುವ ಕೋಹಿನೂರ್ ಆಡಿಟೋರಿಯಂನಲ್ಲಿ, ಇದೇ ಬರುವ 2015 ನೇ ಇಸವಿಯ ಜನವರಿ 1 ರಂದು ನಡೆಯುವ “ಅಂತರಾಷ್ಟ್ರೀಯ ಮೀಲಾದ್ ಸಮಾವೇಶ” ಇದರ ಪ್ರಚಾರ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀಯವರ ಕಿರಾತ್ ನೊಂದಿಗೆ ಕಾರ್ಯಕ್ರಮವು ಆರಂಭವಾಯಿತು.ಈ ಸಮಾವೇಶದ ಅಧ್ಯಕ್ಷತೆಯನ್ನು ಕೆ.ಸಿ.ಎಫ್. ಕುವೈಟ್ ಇದರ ಅಧ್ಯಕ್ಷರಾದ ಜನಾಬ್ ಹಬೀಬ್ ಕೋಯರವರು ವಹಿಸಿ ಅತ್ಯಂತ ಸವಿವರವಾಗಿ ಇದರ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಐ.ಸಿ.ಎಫ್ ಕುವೈಟ್ ಇದರ ಉಪಾಧ್ಯಕ್ಷರಾದ ಬಹುಃ ಹಬೀಬ್ ಬುಖಾರಿ ತಂಞಳ್ ರವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಯಾಕೂಬ್ ಕಾರ್ಕಳ ರವರು ಸ್ವಾಗತ ಭಾಷಣ ಮಾಡಿದರು. ಕೆ.ಕೆ.ಎಮ್.ಎ. ಕುವೈಟ್ ಇದರ ಕಾರ್ಯಾಧ್ಯಕ್ಷರಾದ ಜನಾಬ್ ಬಿ.ಎಮ್. ಇಕ್ಬಾಲ್ ರವರು ಮಾತನಾಡುತ್ತಾ ಜನವರಿಯಲ್ಲಿ ನಡೆಯುವಂತಹ ಅಂತರಾಷ್ಟ್ರೀಯ ಸಮಾವೇಶಕ್ಕೆ ಕೆ.ಕೆ.ಎಮ್.ಎ. ಇದರ ವತಿಯಿಂದ ಸಂಪೂರ್ಣ ಸಹಕಾರಗಳನ್ನು ನೀಡುತ್ತೇವೆ ಎಂದು ಹೇಳಿದರು. ಇದೇ ಸಮಯದಲ್ಲಿ ಪೊಂಬಳ ತಂಞಳ್ ಉಸ್ತಾದ್ ರವರ ಹಸ್ತದಿಂದ ಅಂತರಾಷ್ಟ್ರೀಯ ಮಿಲಾದ್ ಸಮಾವೇಶದ ಬ್ಯಾನರನ್ನು ಕೆ.ಸಿ.ಎಫ್.ನ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಮಾಡಲಾಯಿತು.

Kuwait programe-Nov 29_2014_001

Kuwait programe-Nov 29_2014_002

Kuwait programe-Nov 29_2014_003

Kuwait programe-Nov 29_2014_004

Kuwait programe-Nov 29_2014_005

Kuwait programe-Nov 29_2014_006

Kuwait programe-Nov 29_2014_007

Kuwait programe-Nov 29_2014_008

Kuwait programe-Nov 29_2014_009

Kuwait programe-Nov 29_2014_011

Kuwait programe-Nov 29_2014_012

ಮೊತ್ತ ಮೊದಲನೆಯ ಬಾರಿಗೆ ಕುವೈಟ್ ನ ನೆಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಮಾವೇಶವು ನಡೆಯುತ್ತಿರುವುದರಿಂದ ಇದನ್ನು ಯಶಸ್ವಿಗೊಳಿಸಲು ಕೆ.ಸಿ.ಎಫ್. ನ ಸಂಘಟನಾ ಚತುರರಾದ ಸದಸ್ಯರುಗಳನ್ನು ಒಳಗೊಂಡ, ಎಡ್ವೈಸರಿ ಟೀಮ್,ಉಲಮಾ ಟೀಮ್,ದಾವಾ ಟೀಮ್,ಕಮ್ಯೂನಿಕೇಶನ್ ಟೀಮ್, ಫೈನಾನ್ಸ್ ಟೀಮ್, ರೀಫ್ರೆಶ್ ಮೆಂಟ್ ಟೀಮ್, ಮೀಡಿಯಾ ಟೀಮ್, ಟ್ರಾನ್ಸ್ ಪೋರ್ಟ್ ಟೀಮ್, ಸ್ಟೇಜ್ ಎರೇಜ್ ಮೆಂಟ್ ಟೀಮ್ ಮುಂತಾದ ಹಲವು ಟೀಮ್ ಗಳನ್ನು ಮಾಡಲಾಗಿದೆ. ಎಲ್ಲಾ ಟೀಮ್ ಗಳ ಮುಖ್ಯಸ್ಥರು ಅವರ ಜೊತೆಗಿರುವ ಸದಸ್ಯರುಗಳ ಸಹಕಾರದೊಂದಗೆ ತಮಗೆ ನೀಡಿರುವ ಜವಾಬ್ದಾರಿಗಳನ್ನು ದಕ್ಷತೆಯೊಂದಿಗೆ ಮಾಡುವ ವಾಗ್ದಾನವನ್ನು ಮಾಡಿದ್ದಾರೆ.

ವೇದಿಕೆಯಲ್ಲಿ ಅಶ್ರಫ್ ಝೈನಿ, ನಝೀರ್ ನಯೀಮಿ, ಅಬ್ದುಲ್ ಹಕೀಮ್ ದಾರಿಮಿ, ಅಲವಿ ಸಖಾಫಿ ತಂಜೇರಿ, ಉಮರ್ ಝುಹ್ರಿ, ಅಡ್ವೊಕೇಟ್ ತನ್ವೀರ್ ಉಪಸ್ಥಿತರಿದ್ದರು.ಮನ್ಸೂರ್ ಅಲಿ (ಕಾರ್ಯದರ್ಶಿ ಕೆ.ಸಿ.ಎಫ್.ಕುವೈಟ್) ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಮುಸ್ತಫಾ ಉಳ್ಳಾಲ ರವರು ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಅಥಿತಿಯಾಗಿ ಆಗಮಿಸಿದ ಎಸ್.ವೈ.ಎಸ್. ಇದರ ರಾಜ್ಯಾಧ್ಯಕ್ಷರಾದ ಪೊನ್ಮಲ್ ಅಬ್ದುಲ್ ಕಾದಿರ್ ಮುಸ್ಲಿಯಾರ್ ರವರವರನ್ನು ಶಾಲು ಹೊದಿಸುವ ಮೂಲಕ ಸನ್ಮಾನಿಸಲಾಯಿತು. ಇವರ ಹಿತೋಪಚನ ಹಾಗೂ ದುವಾಃದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕೊನೆಯಲ್ಲಿ ಕಾರ್ಯಕ್ರಮದಲ್ಲಿ ಆಗಮಿಸಿದ ಅಥಿತಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ವರದಿ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ
ಕುವೈಟ್

Write A Comment