ಪ್ರವಾದಿ ಪ್ರೇಮವು ಸತ್ಯವಿಶ್ವಾಸಿಗಳ ಅವಿಭಾಜ್ಯ ಅಂಗವಾ ಗಿದ್ದು, ಪ್ರವಾದಿ ಪ್ರೇಮವಿಲ್ಲದೆ ವಿಶ್ವಾಸವು ಪೂರ್ತಿಯಾಗಲು ಸಾಧ್ಯವಿಲ್ಲ. ವಿಶ್ವಕ್ಕೆ ಮಾನವೀಯ ಸಂದೇಶವನ್ನು ಪಸರಿಸಿದ ವಿಶ್ವ ವಿಮೋಚಕ ಪ್ರವಾದಿ ಸ.ಅ ರವರು ಜಗತ್ತಿನ ಶಾಂತಿ, ಸೌಹಾರ್ದತೆಯ ವಕ್ತಾರರಾಗಿ ಬಣ್ಣಿಸಲ್ಪಟ್ಟರು.ಆಧುನಿಕ ಜಗತ್ತು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೂ ಪರಿಹಾರ ಸತ್ಯವಿಶ್ವಾಸ ಮತ್ತು ವಿಶ್ವಪ್ರವಾದಿ (ಸ್ವ.ಅ)ರ ಪುಣ್ಯ ಚರ್ಯೆಗಳಿಗೆ ಮರಳುವುದಾಗಿದೆ. ವರ್ತಮಾನ ಕಾಲಘಟ್ಟದಲ್ಲಿ ಪ್ರವಾದಿ (ಸ್ವ.ಅ)ರ ವೀಕ್ಷಣೆ ಮತ್ತು ನಿರ್ದೇಶನಗಳ ಪ್ರಸಕ್ತಿ ಹೆಚ್ಚುತಿದೆಯೆಂದು ದುಬೈ ಯಲ್ಲಿ ಕೆ ಐ ಸಿ ದುಬೈ ಸಮಿತಿ ಆಯೋಜಿಸಿದ ಮೌಲೂದ್ ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಬಹು ಫೈಝಲ್ ರಹ್ಮಾನಿ ಬಾಯಾರ್ ರವರು ಅಭಿಪ್ರಾಯಿಸಿದರು.
ಪ್ರವಾದಿ ಮುಹಮ್ಮದ್(ಸ)ರನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವುದರಿಂದ ಇಹಪರ ಬದುಕಿನ ಉನ್ನತಿಗೆ ದಾರಿಯೊದಗುವುದು. ಇಸ್ಲಾಮೀ ಇತಿಹಾಸದಲ್ಲಿ ಗುರುತಿಸಲ್ಪಡುವ ಮಹಾತ್ಮರೆಲ್ಲರೂ ಪ್ರವಾದಿವರ್ಯ(ಸ)ರನ್ನು ಪ್ರೀತಿಸಿಯೇ ಸತ್ಪುರುಷರೆನಿಸಿಕೊಂಡರು. ಅವರನ್ನು ಜೀವನ ಪರ್ಯಂತ ಪ್ರೀತಿಸಿದಾಗ ಮಾತ್ರ ಎಲ್ಲ ಒಳಿತಿನ ಕದಗಳು ತೆರೆದು ಕೊಳ್ಳುವುದೆಂದು ಪ್ರವಾದಿ ಮುಹಮ್ಮದ್ (ಸ) ಸಕಲ ಮಾನವ ಜೀವಕೋಟಿಗಳ ಸಾಕಾರ ಪ್ರೇಮ ಮೂರ್ತಿ. ಶ್ರೇಷ್ಠ ಗುಣಗಳ ಖಣಿ. ತಾವು ಬೋಧಿಸಿದ್ದನ್ನು ಸ್ವತಃ ಆಚರಿಸಿ ತೋರಿಸಿದ ಧೀಮಂತ ವ್ಯಕ್ತಿ. ಅವರ ಸಂದೇಶವು ಸಾರ್ವ ಜನಿಕ ಮತ್ತು ಸಾರ್ವಕಾಲಿಕವಾಗಿದೆ. ವಿಪರ್ಯಾಸವೆಂದರೆ ಇಂದು ಪ್ರವಾದಿ ಪ್ರೇಮ ಅನ್ಯರ ಮುಂದೆ ತೋರ್ಪಡಿಕೆಯ ವಸ್ತುವಾಗಿ ಪರಿವರ್ತನೆಗೊಂಡು ಪ್ರವಾದಿ ಸ.ಅ ರವರು ಕಲಿಸಿಕೊಟ್ಟಂತಹ ತ್ಯಾಗೋಜ್ಜಲವಾದ ಬದುಕನ್ನು ಯುವಜನತೆಯ ಧಿಕ್ಕರಿಸಿ ನಡೆಯುತ್ತಾ ಇದ್ದಾರೆ. ಆದ್ದರಿಂದ ಯುವ ಸಮೂಹವು ಪ್ರವಾದಿ ಜೀವನ ಚರ್ಯೆಯನ್ನು ಮೈಗೂಡಿಸಿಕೊಂಡು ಇಸ್ಲಾಮಿ ತತ್ವಾದರ್ಶಗಳನ್ನು ಅಳವಡಿಸಿಕೊಂಡು, ತನ್ನ ಜೀವನೋಪಾಯಕ್ಕಾಗಿ ಕಡಲಾಚೆಗೆ ಧಾವಿಸಿಬಂದು ಅಹ್ಲು ಸುನ್ನತ್ತಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸಿಕೊಂಡು ಆ ಮೂಲಕ ಪರಲೋಕದ ಯಶಸನ್ನು ಬಯಸುವಂತೆ ದೇರಾ ರಫೀ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರೆ ನೀಡಿದರು.
ಕೆ ಐ ಸಿ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸುಪ್ರಸಿದ್ದ ಕುಂಬೋಲ್ ಕುಟುಂಬದ ಕೆ ಎಸ್ ಆಲಿ ತಂಙಲ್ ರವರ ಸುಪುತ್ರರಾದ ಸಯ್ಯದ್ ರಹೀಸ್ ತಂಙಲ್ ರವರು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ನಿಭಂದನೆಗಳಿಲ್ಲದೆ ಕೈಗೊಳ್ಳಬಹುದಾದ ಪುಣ್ಯ ಕರ್ಮಗಳಲ್ಲಿ ಒಂದಾಗಿದೆ ಪ್ರವಾದಿ ಕೀರ್ತನೆ. ಇಂದು ಯುವ ಸಮೂಹವು ವಿವಿದ ಮೋಜು ಮಸ್ತಿಗಲಿಂದಾಗಿ ಇಸ್ಲಾಮಿನ ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದು, ಇದು ಪರಲೋಕದ ಅಪಜಯದ ಮುನ್ಸೂಚನೆಯಾಗಿದೆ ಆದ್ದರಿಂದ ಯಾವ ಸಮಯದಲ್ಲೂ ಪ್ರತಿಫ಼ಲ ನಿರೀಕ್ಷಿಸಿ ಪ್ರವಾದಿಯವರ ಮೇಲೆ ಸ್ವಲಾತ್ ಕೀರ್ತನೆಗಳನ್ನು ಹೇಳುತ್ತಾ ಅವರ ಮೇಲೆ ಪ್ರೀತಿಯನ್ನು ತೋರ್ಪಡಿಸುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಕೆ ಐ ಸಿ ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಫ ಗೂನಡ್ಕರವರು ಅತಿಥಿಗಳನ್ನು ಸ್ವಾಗತಿಸಿ ಕೆ ಐ ಸಿ – ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಇದರ ಕಾರ್ಯಕ್ಷೇತ್ರ , ಅಲ್ಲಿನ ವಿಧ್ಯಾಬ್ಯಾಸದ ಗುಣಮಟ್ಟವ , ಹಾಗು ಶಿಸ್ತು ಬದ್ದ ಕ್ಯಾಂಪಸ್ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಕೆ ಐ ಸಿ ಯ ಮುಂದೆ ವಿವಿದ ಜವಾಬ್ದಾರಿಗಲಿದ್ದು ಅವುಗಳ ಸಫಳತೆಗಾಗಿ ತಾವೆಲ್ಲರೂ ಕೆ ಐ ಸಿ ಯೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಕುಂಬೋಲ್ ಕುಟುಂಬದ ಶಮೀಮ್ ತಂಙಲ್ , ಕೆ ಐ ಸಿ ಧಾರ್ಮಿಕ ಸಲಹೆಗಾರರಾದ ಶಂಸುದ್ದೀನ್ ಹನೀಫಿ , ನೌಶಾದ್ ಫೈಝಿ, ಮೊದಲಾದವರುಸಂಧರ್ಬೋಜಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಲ್ಲದೆ ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆ ಐ ಸಿ ದುಬೈ ಸಮಿತಿಗೆ ನೇತೃತ್ವವನ್ನು ನೀಡುತ್ತ ಬಂದಿದ್ದು, ಅಧೀನ ದಲ್ಲಿ ದುಬೈ ಯಾದ್ಯಂತ ಹಲವಾರು ಘಟಕಗಳ ಸ್ಥಾಪನೆ , ಕೆ ಐ ಸಿ ಹಾಗು ಹೋಗುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ಅಬ್ದುಲ್ ಖಾದರ್ ಬೈತಡ್ಕ ರವರನ್ನು ಇದೆ ಸಂದರ್ಭದಲ್ಲಿ ಕೆ ಐ ಸಿ ದುಬೈ ಸಮಿತಿ ಪಧಾಧಿಕಾರಿಗಳ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೆ ಅನಿರೀಕ್ಷಿತವಾಗಿ ಯು ಎ ಇ ಗೆ ಭೇಟಿ ನೀಡಿದ ಸಯ್ಯದ್ ಕುಂಬೋಲ್ ಮನೆತನದ ಸಯ್ಯದ್ ರಹೀಸ್ ತಂಙಲ್ ಹಾಗೂ ಸಯ್ಯದ್ ಶಮೀಮ್ ತಂಙಲ್ ರವರನ್ನು ಇದೇ ಸಂದರ್ಭದಲ್ಲಿ ಕೆ ಐ ಸಿ ಪಧಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ ಐ ಸಿ ದುಬೈ ಸಮಿತಿ ಅದ್ಯಕ್ಷರಾದ ಜನಾಬ್ ಎಸ್ ಎಂ ಅಶ್ರಫ್ ಮಾಂತೂರ್ ರವರು ಮಾತನಾಡಿ ಹಲವಾರು ವರ್ಷಗಳಿಂದ ಸಮುದಾಯದ ವಿಧ್ಯಾರ್ಥಿಗಲಿ ಆಶಾಕಿರಣವಾಗಿ, ವಿಧ್ಯಾರ್ಜನೆ ಒದಗಿಸುತ್ತಾ ಬಂದಿರುವ ಕೆ ಐ ಸಿ ಯ ಉದ್ದೇಶ, ಮುಂದಿನ ಪ್ರಗತಿಯ ಬಗ್ಗೆ ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಕೆ ಐ ಸಿ ವಿವಿದ ಸಮಿತಿ ಘಟಕಗಳ ಪಧಾಧಿಕಾರಿಗಳು, ಸಂಘ ಸಂಸ್ಥೆಗಳ ನೇತಾರರು , ಹಾಗು ಕೆ ಐ ಸಿ ಹಿತೈಷಿಗಳು ಉಪಸ್ತಿತರಿದ್ದು ಕೆ ಐ ಸಿ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಯವರ ನೇತೃತ್ವದಲ್ಲಿ ಮೌಲೂದ್ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಅಶ್ರಫ್ ಪರ್ಲಡ್ಕ ರವರು ವಂದಿಸಿ ಆಸಿಫ್ ಪುತ್ತೂರು ರವರು ಕಾರ್ಯಕ್ರಮ ನಿರೂಪಿಸಿದರು.