ಫೋಟೋ: ಅಶೋಕ್ ಬೆಳ್ಮಣ್
ದುಬೈಸ ಜ.26: ದುಬೈ ರಜಕ ಫ್ಯಾಮಿಲಿ ವತಿಯಿಂದ ಜನವರಿ 23ರಂ ಶುಕ್ರವಾರದಂದು ಬರ್‌ದುಬೈಯ ಸಿಂಧಿ ಸೆರೆಮನಿಹಾಲ್‌ನಲ್ಲಿ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆದ ಪೂಜಾ ಕೈಂಕರ್ಯದಲ್ಲಿ ಹಲವಾರು ಭಕ್ತರು ಪಾಲ್ಗೊಂಡರು.
ರಘು ಭಟ್‌ರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಹಲವಾರು ಭಕ್ತರು ಮಂಗಳಾರತಿ ಹಾಗೂ ಮಹಾ ಪ್ರಸಾದ ಸ್ವೀಕರಿಸಿದರು. ಪೂಜೆಯಲ್ಲಿ ಯುಎಇಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.