ಗಲ್ಫ್

ಕರ್ನಾಟಕ ಇಸ್ಲಾಮಿಕ್ ಸೆಂಟರ್ ರಾಷ್ಟ್ರೀಯ ಸಮಿತಿ 2015-16 ನೇ ಸಾಲಿಗೆ ನೂತನ ಸಾರಥಿಗಳಾಗಿ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ, ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ- ನೂರ್ ಮುಹಮ್ಮದ್ ನೀರ್ಕಜೆ ಪುನರಾಯ್ಕೆ

Pinterest LinkedIn Tumblr

20150320_145059

ದುಬೈ: ಧಾರ್ಮಿಕ ಹಾಗೂ ಲೌಕಿಕ ವಿಧ್ಯಾಬ್ಯಾಸವನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಾ ಬಂದಿರುವ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಇದರ ಮೇಲುಸ್ತುವಾರಿ ಸಮಿತಿ ಕಳೆದ ದಶಕ ಗಳಿಂದ ಗಲ್ಫ್ ರಾಷ್ಟ್ರ ಯು ಎ ಇ ಯಾದ್ಯಂತ ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಪ್ರಚಲಿತದಲ್ಲಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ರಾಷ್ಟ್ರೀಯ ಸಮಿತಿ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ದೇರಾ ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಐ ಸಿ ಗೌರವಾಧ್ಯಕ್ಷಾರದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಯವರು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಸುಲೈಮಾನ್ ಮುಸ್ಲಿಯಾರ್ ಕಲ್ಲೆಗರವರು ರವರು ಮಾತನಾಡಿ ಹಂತ ಹಂತವಾಗಿ ಕೆ ಐ ಸಿ ಬೆಳೆದು ಬಂದ ಹಾದಿ, ವಿಧ್ಯಾ ಸಂಸ್ಥೆಯ ಮಹತ್ವ , ಅಲ್ಲಿನ ವಿಧ್ಯಾಭ್ಯಾಸದ ಗುಣ ಮಟ್ಟದ ಬಗ್ಗೆ ಸವಿವರವಾಗಿ ವಿವರಿಸಿ ಮುಂದಿನ ದಿನಗಳಲ್ಲಿ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಲಿ ಎಂದು ಶುಭ ಹಾರೈಸಿ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಅತಿಥಿಗಳನ್ನು ಹಾಗೂ ಆಗಮಿಸಿದ ಕೆ ಐ ಸಿ ನೇತಾರರನ್ನು , ಹಿತೈಷಿಗಳನ್ನು ತುಂಬು ಹೃದಯದಿಂದ ಸ್ವಾಗತಿಸಿದರು .

20150320_150435

20150320_150929

20150320_152900

20150320_154244

20150320_155501

20150320_155525

20150320_173215

20150320_174306

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಐ ಸಿ ಗೌರವಾಧ್ಯಕ್ಷಾರದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಮಾತನಾಡಿ , ಇಸ್ಲಾಂ ವಿಧ್ಯಾಬ್ಯಾಸಕ್ಕೆ ನೀಡಿದ ಮಹತ್ವ . ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯದ ಯುವ ಪ್ರತಿಭೆಗಳು ಹಲವಾರು ಕಾರಣಗಳಿಂದ ತಮ್ಮ ಜೀವನದ ಅವಿಭಾಜ್ಯ ಅಂಗವಾದ ಶಿಕ್ಷಣದಿಂದ ವಂಚಿತರಾಗುವುದನ್ನು ಮನಗಂಡು , ಬಡ ಅನಾಥ ನಿರ್ಗತಿಕ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಅವರ ಅಭಿರುಚಿಗನುಗುಣವಾಗಿ ವಿಧ್ಯಾಧಾನವನ್ನು ನೀಡುತ್ತಾ ಬಂದಿರುವ ಸಂಸ್ಥೆಯಾಗಿದೆ ಕೆ ಐ ಸಿ ಎಂಬುದು. ಇಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರ ವಾಗಿತ್ತು ಕೊಂಡು ಸಮಾಜದಲ್ಲಿ ಸಮುದಾಯದಲ್ಲಿ ನಮ್ಮ ಸಂಸ್ಥೆಯ ವಿಧ್ಯಾರ್ಥಿಗಳು ವಿವಿದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ನಮ್ಮ ಸೇವೆಯ ಪ್ರತಿಪಲವಾಗಿದೆ ಎನ್ನುತ್ತಾ ಸಂಸ್ಥೆಯಲ್ಲಿ ಮುಂದೆ ಹಲವಾರು ಯೋಜನೆಗಳು ಅನುಷ್ಠಾನಗಳು ಬಾಕಿ ಇದ್ದು ಪಧಾಧಿಕಾರಿಗಳು ಕೈ ಜೋಡಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಕೆ ಐ ಸಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಮಾತನಾಡುತ್ತಾ ಸಮುದಾಯದಲ್ಲಿನ ದುರ್ಬಲ ಯುವ ಸಮೂಹವನ್ನು ಗುರುತಿಸಿಕೊಂಡು , ವಿಧ್ಯಾಭ್ಯಾಸವನ್ನು ಅರ್ದದಲ್ಲಿ ಮೊಟಕು ಗೊಳಿಸಿ ಸಮಾಜಕ್ಕೆ ಮಾರಕವಾಗಿ, ಸಮುದಾಯಕ್ಕೆ ಕಪ್ಪು ಚುಕ್ಕೆಯಾಗುವುದನ್ನು ಮನಗಂಡು ಅಂತಹ ವಿಧ್ಯಾರ್ಥಿಗಳಿಗೆ ಸ್ಥಾಪನೆಯ ನಿಯಮಾನುಸಾರ ಅರ್ಹತಾ ಪರೀಕ್ಷೆಗಲ ಮೂಲಕ ಆಯ್ಕೆ ಗೊಳಿಸಿ ಸುದೀರ್ಗ ಎಂಟು ವರ್ಷಗಳ ವಿಧ್ಯಾರ್ಜನೆಯ ಮೂಲಕ ಪಮುಖ ಆರು ಭಾಷೆಗಳಲ್ಲಿ ದೀನೀ ಪ್ರಬೋಧನೆಗೆ ಯುವ ಪಂಡಿತರನ್ನು ಸಮುದಾಯಕ್ಕೆ ಸಮರ್ಪಿಸುತ್ತಾ ಬಂದಿರುವ ಈ ಸಂಸ್ಥೆಯು ಇಂದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ಪರಿಚಯಿಸಿಕೊಂಡಿದೆ . ಸಮರ್ಪಕ ಮೂಲ ಭೂತ ಸೌಕರ್ಯಗಳನ್ನೋಳಗೊಂಡ ಸುಸಜ್ಜಿತ ಕಟ್ಟಡ ಮಸೀದಿ ಪ್ರಶಾಂತ ಆವರಣದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ಈ ಸಂಸ್ಥೆಯ ವಿಧ್ಯಾರ್ಥಿಗಳು ಇಂದು ರಾಷ್ಟ್ರ ಮಟ್ಟದಲ್ಲೇ ತಮ್ಮನ್ನು ಪ್ರತಿನಿಧಿಸಲು ಸಮರ್ಪಕರಾಗಿದ್ದು ಇವೆಲ್ಲವೂ ವಿಧ್ಯಾ ಸಂಸ್ಥೆಯ ಗುಣ ಮಟ್ಟ ಶಿಸ್ತು ಬದ್ದ ಶಿಕ್ಷಣದ ಪ್ರತೀಕವಾಗಿದೆ ಎಂದು ವಿವರಿಸಿ ಮುಂದಿನ ಕೆಲವೇ ಸಮಯಗಳಲ್ಲಿ ನೂತನ ದಾಖಲಾತಿಯು ಪ್ರಾರಂಭಗೋಳ್ಳಲ್ಲಿದ್ದು , ವಿಧ್ಯಾ ಸಂಸ್ಥೆಯನ್ನು ಪ್ರಚಾರಪಡಿಸಿ ಪಧಾಧಿಕಾರಿಗಳು ಸಂಸ್ಥೆಯನ್ನು ಬೆಳೆಸುವಲ್ಲಿ ಸಹಕರಿಸುವಂತೆ ಕೇಳಿಕೊಂಡು ಹಾಲಿ ಸಮಿತಿಯನ್ನು ಬರಕಾಸ್ತು ಗೊಳಿಸಿದರು.

UAE NATIONAL COMMETTE WORKING PRESIDENT - SHAREEF KAAVU UAE  NATIONAL COMMETTE HON.PRES. - SAYYAD ASKARALI ATHANGHAL UAE NATIONAL COMMETTE  PRESIDENT- MOYDEEN KUTTI HAAJI DIBBA UAE NATIONAL COMMETTE GEN. SECRATORY ,- NOOR MOHAMMAD NEERKAJE(1) UAE NATIONAL COMMETTE TRESSURER -   ABDUL SALAM BAPPALIGE(1)

ಕೆ ಐ ಸಿ, ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ರವರು ನೂತನ ಸಮಿತಿ ಪಧಾಧಿಕಾರಿ ನೇಮಕದ ಜವಾಬ್ದಾರಿವಹಿಸಿ ಮಾತನಾಡಿ ಸಮಿತಿ ಕಾರ್ಯವ್ಯಾಪ್ತಿ , ಸಂಘಟನೆ ಯಾ ಪಧಾಧಿಕಾರಿಗಳ ಮೇಲಿನ ಜವಾಬ್ದಾರಿ, ಹಾಗೂ ಇಸ್ಲಾಂ ವ್ಯಾಖ್ಯಾನಗಳಲ್ಲಿ ಸಂಘಟನೆಯ ಅನಿವಾರ್ಯತೆಯನ್ನು ತಿಳಿಯಾಗಿ ವಿವರಿಸಿ ಪಧಾಧಿಕಾರಿಗಳ ಆಯ್ಕೆಗೆ ಅವಕಾಶ ಮಾಡಿಕೊಟ್ಟರು.ಅದರಂತೆ ನೂತನ ಸಮಿತಿ ಗೌರವಾದ್ಯಕ್ಷರಾಗಿ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಹಾಗೂ ಅಧ್ಯಕ್ಷರಾಗಿ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ಆಯ್ಕೆ ಗೊಂಡರೆ ಪ್ರಧಾನ ಕಾರ್ಯದರ್ಶಿ ಯಾಗಿ ನೂರ್ ಮುಹಮ್ಮದ್ ನೀರ್ಕಜೆ ಯವರು ಪುನರಾಯ್ಕೆ ಗೊಂಡು . ಕಾರ್ಯಾದ್ಯಕ್ಷರಾಗಿ ಶರೀಫ್ ಕಾವು ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಬಪ್ಪಲಿಗೆ ಹಾಗೂ ಅಶ್ರಫ್ ಅರ್ತಿಕೆರೆ,  ಅಬ್ಬಾಸ್ ಕೇಕುಡೆರವರನ್ನು ನೇಮಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ನೌಶಾದ್ ಫೈಝಿ ಅಡ್ಯಾರ್ ಕನ್ನೂರ್ , ಶಂಸುದ್ದೀನ್ ಹನೀಫಿ , ದುಬೈ ಸಮಿತಿ ಅದ್ಯಕ್ಷರಾದ ಅಶ್ರಫ್ ಖಾನ್ ಮಾನ್ತೂರ್ , ಅಬುದಾಬಿ ಸಮಿತಿ ಅದ್ಯಕ್ಷರಾದ ಹನೀಫ್ ಆರ್ಯಮೂಲೆ , ಶಾರ್ಜಾ ಸಮಿತಿ ಅದ್ಯಕ್ಷರಾದ ಅಬ್ದುಲ್ ರಝಾಕ್ ಮಣಿಲಾ , ರಾಸ್ ಅಲ್ ಖೈಮಾ ಸಮಿತಿ ಅದ್ಯಕ್ಷರಾದ ಶಾಫಿ ಮುಲಾರ್ಪಟ್ನ, ಅಬ್ದುಲ್ ರಝಾಕ್ ಬುಲ್ಲೇರಿಕಟ್ಟೆ , ಅಬ್ದುಲ್ ಖಾದರ್ ಬೈತಡ್ಕ, ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷರಾದ ಜಬ್ಬಾರ್ ಬೈತಡ್ಕ, ನೈಫ್ ಘಟಕ ಅದ್ಯಕ್ಷರಾದ ಅಬ್ದುಲ್ಲಾ ನಈಮಿ , ಹನೀಫ್ ಮುಸ್ಲಿಯಾರ್ ಬಿಸಿ ರೋಡ್ , ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ಯವರು ವರದಿ ವಾಚಿಸಿ ಶರೀಫ್ ಕಾವು ರವರು ಒಂದು ವರ್ಷಗಳ ಲೆಕ್ಕ ಪತ್ರಗಳನ್ನು ಮಂಡಿಸಿದರು . ಕಾರ್ಯಕ್ರಮದಲ್ಲಿ ಕೆ ಐ ಸಿ ಅಧೀನ ವಿವಿದ ಪಧಾಧಿಕಾರಿಗಳು ಉಪಸ್ತಿತರಿದ್ದು ವಿವಿದ ರೀತಿಯಲ್ಲಿ ಸಹಕರಿಸಿದರು. ಅಶ್ರಫ್ ಪರ್ಲಡ್ಕ ರವರು ಕಾರ್ಯಕ್ರಮ ನಿರೂಪಿಸಿದರು .

Write A Comment