ಗಲ್ಫ್

ಬಹರೈನ್ ಕುವೈಟ್ ಕನ್ನಡಿಗರ ಸ್ನೇಹ ಸೌಹಾರ್ದ ಕ್ರಿಕೆಟ್ ಪಂದ್ಯಾಟ : ವಿಜ್ರಂಭಿಸಿದ ಅತಿಥೇಯ ಬಹರೈನ್ ಕನ್ನಡಿಗರ ಕ್ರಿಕೆಟ್ ತಂಡ

Pinterest LinkedIn Tumblr

Kuwait Bahrain Tournment Pic

ಬಹರೈನ್ ; ಇಲ್ಲಿನ ಬುಸೆತೀನ್ ಕ್ರೀಡಾಂಗಣದಲ್ಲಿ ಜರುಗಿದ ಬಹರೈನ್ ಕನ್ನಡಿಗರ ಹಾಗು ಕುವೈಟ್ ಕನ್ನಡಿಗರ ಕ್ರಿಕೆಟ್ ತಂಡಗಳ ನಡುವೆ ಜರುಗಿದ ನಿಗದಿತ ಓವರುಗಳ ಎರಡು ಪಂದ್ಯಾಟಗಳಲ್ಲೂ ಅತಿಥೇಯ ಬಹರೈನ್ ಕನ್ನಡಿಗರ ತಂಡವು ಮೇಲುಗೈ ಸಾಧಿಸಿ ನಿಚ್ಚಳ ಜಯ ಗಳಿಸಿತು . ಒಂದು ಹಂತದಲ್ಲಿ ಕುವೈಟ್ ತಂಡವು ತೀವ್ರ ಪೈಪೋಟಿ ನೀಡಿದರೂ ಪಂದ್ಯಾಟವು ರೋಮಾಂಚನಕಾರಿ ತಿರುವು ಪಡೆದು ಬಹರೈನ್ ತಂಡವು ಎರಡೂ ಪಂದ್ಯಾಟಗಳನ್ನು ಜಯಿಸಿತು .

ದ್ವೀಪದ ಕನ್ನಡಿಗರ ಹಾಗು ಕುವೈಟ್ ಕನ್ನಡಿಗರ ನಡುವಿನ ಭಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸಲು ದ್ವೀಪದ ಹಿರಿಯ ಕನ್ನಡಿಗ ,ಕ್ರೀಡಾ ಹಾಗು ಕಲಾ ಪ್ರೇಮಿಯೂ ,ಪೋಷಕರೂ ಆಗಿರುವ ಶ್ರೀ ಅಮರನಾಥ್ ರೈ ಯವರು ಕುವೈಟ್ ತಂಡವನ್ನು ಬಹರೈನಿಗೆ ಆಹ್ವಾನಿಸಿ ಪಂದ್ಯಾಟವನ್ನು ಆಯೋಜಿಸಿದ್ದರು . ಬಹರೈನ್ ತಂಡದ ಕಪ್ತಾನರಾಗಿ ಶ್ರೀ ಪ್ರದೀಪ್ ಶೆಟ್ಟಿಯವರು ಕಾರ್ಯನಿರ್ವಹಿಸಿದ್ದು ಮಾತ್ರವಲ್ಲದೆ ಕ್ರೀಡಾಂಗಣ ಹಾಗು ಪಂದ್ಯಾಟಕ್ಕೆ ಬೇಕಾಗಿರುವ ಇನ್ನಿತರ ವ್ಯವಸ್ಥೆಗಳನ್ನು ಮಾಡಿದ್ದರೆ ,ತಂಡದ ವ್ಯವಸ್ಥಾಪಕರಾಗಿ ಶ್ರೀ ರಾಜೇಶ್ ಮಚಾಡೋ ರವರು ಕಾರ್ಯನಿರ್ವಹಿಸಿದ್ದರು . ಶ್ರೀ ಡಿ ರಮೇಶ್ ಹಾಗು ಅಶೋಕ್ ಕಟೀಲ್ರವರು ಪಂದ್ಯಾಟವು ಯಶಸ್ವಿಯಾಗಿ ಜರುಗುವಲ್ಲಿ ಸಹಕರಿಸಿದ್ದರು .

ಕುವೈಟ್ ತಂಡದ ವ್ಯವಸ್ಥಾಪಕರಾಗಿ ಡಾಕ್ಟರ್ ಪ್ರಭಾತ್ ಶೆಟ್ಟಿಯವರು ಕಾರ್ಯನಿರ್ವಹಿಸಿದ್ದರೆ ,ಶ್ರೀ ಅಲೋಕ್ ರವರು ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು . ಈ ಪಂದ್ಯಾಟದ ಪ್ರಾಯೋಜಕರುಗಳಾಗಿ ಶ್ರೀಗಳಾದ ಶಾಂತರಾಮ್ ಶೆಟ್ಟಿ ,ಅಬ್ದುಲ್ ಸತ್ತಾರ್ ಕೊಟೆಶ್ವರ್ ,ಪ್ರಕಾಶ್ ಶೆಟ್ಟಿ ಹಾಗು ಸವಿನ್ ಶೆಟ್ಟಿಯವರು ಸಹಕರಿಸಿದ್ದರು . ಗಣ್ಯರುಗಳಾದ ಮೊಹಮ್ಮದ್ ಮನ್ಸೂರ್ ,ರಾಜೀವ್ ಮೆನನ್ ,ಸಂತೋಷ್ ಕರ್ಕೇರ ,ಥಾಮಸ್ ,ಆನಂದ್ ಲೋಬೋ ,ರಾಜೇಶ್ ಶೆಟ್ಟಿ ,ಕಿರಣ್ ಉಪಾಧ್ಯಾಯ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . ಪಂದ್ಯಾಟದ ಸಮಾರೋಪ ಸಮಾರಂಭವು ಇಲ್ಲಿನ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಜರುಗಿ ಟ್ರೋಫಿಗಳನ್ನು ವಿತರಿಸಲಾಯಿತು.
ಚಿತ್ರ -ವರದಿ -ಕಮಲಾಕ್ಷ ಅಮೀನ್ .

Write A Comment