ಗಲ್ಫ್

ಸೆ.11ರಂದು ದುಬೈಯಲ್ಲಿ ‘ಬಿಲ್ಲವಾಸ್ ಟ್ರೋಫಿ-2015’ ಕ್ರಿಕೆಟ್ ಪಂದ್ಯಾಟ

Pinterest LinkedIn Tumblr

Slide 1

ದುಬೈ, ಸೆ.7: ಬಿಲ್ಲವಾಸ್ ದುಬೈ ಪ್ರಾಯೋಜಕತ್ವದಲ್ಲಿ ಸೆ.11ರಂದು ದುಬೈಯ ಝಬೀಲ್ ಪಾರ್ಕ್ ಕ್ರೀಡಾಂಗಣದ ಗೇಟ್ ನಂ.11ರಲ್ಲಿ ‘ಬಿಲ್ಲವಾಸ್ ಟ್ರೋಫಿ-2015’ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.

IMG_9701

IMG_9702

5 ಓವರಿನ ಹಾರ್ಡ್ ಟೆನ್ನಿಸ್ ಬಾಲ್ ಪಂದ್ಯಾಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿದ್ದು, ಸೆ.11ರಂದು ಬೆಳಗ್ಗೆ 7.30ಕ್ಕೆ ಆರಂಭವಾಗಲಿದೆ. ವಿಜೇತ ತಂಡಕ್ಕೆ 5 ಸಾವಿರ ದಿರ್ಹಂ ಹಾಗೂ ಟ್ರೋಫಿ, ರನ್ನರ್ ತಂಡಕ್ಕೆ 3 ಸಾವಿರ ದಿರ್ಹಂ ಹಾಗೂ ಟ್ರೋಫಿ ನೀಡಿ ಗೌರವಿಲಾಗುವುದು.

ದುಬೈಯ ಆ್ಯಕ್ಮೆ ದುಬೈ, ಮೊಗವೀರ ಯುಎಇ, ವಿಕೆಎಸ್ ದುಬೈ, ಮಂಗಳೂರು ಯುನೈಟೆಡ್, ಚಿಲ್ಲಿವಿಲ್ಲಿ, ಕುಶಿ ಸೂಪರ್ ಕಿಂಗ್ಸ್ ಸೇರಿದಂತೆ ಒಟ್ಟು 24 ತಂಡಗಳು ಸೆಣಸಾಡಲಿವೆ.

Write A Comment