ಗಲ್ಫ್

ಸೌದಿಗೆ ಭಾರತದ ರಾಯಭಾರಿಯಾಗಿ ಜಾವೇದ್ ಅಹ್ಮದ್

Pinterest LinkedIn Tumblr

Javed

ಮುಂಬೈ: ಸೌದಿ ಆರೇಬಿಯಕ್ಕೆ ಭಾರತದ ನೂತನ ರಾಯಭಾರಿಯಾಗಿ ಮುಂಬೈ ಪೊಲೀಸ್ ಆಯುಕ್ತ ಅಹ್ಮದ್ ಜಾವೇದ್ ಶೀಘ್ರದಲ್ಲಿಯೇ ನೇಮಕಗೊಳ್ಳಲಿದ್ದಾರೆ. ಜಾವೇದ್ ಅವರು ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಯಭಾರಿ ಹುದ್ದೆಗೆ ಆಯ್ಕೆಯಾದ ಪ್ರಪ್ರಥಮ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್)ಯಲ್ಲಿರದ ಅಧಿಕಾರಿಯಾಗಿದ್ದಾರೆ.

ಜಾವೇದ್ ಅವರು ಸೆಪ್ಟಂಬರ್‌ನಲ್ಲಿ ಮುಂಬೈಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು. ಅವರು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಪೊಲೀಸ್ ಸೇವೆ(ಐಪಿಎಸ್)ಯಿಂದ ನಿವೃತ್ತರಾಗಲಿರುವರು. ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೌದಿ ಆರೇಬಿಯ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದ್ದು, ಅದಕ್ಕೂ ಮುನ್ನ ಜಾವೇದ್, ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಸೌದಿ ಆರೇಬಿಯದಲ್ಲಿ ಭಾರತದ ರಾಯಭಾರಿಯಾಗಿದ್ದ ಹಾಮೀದ್ ಅಲಿ ಈ ವರ್ಷದ ಆರಂಭದಲ್ಲಿ ನಿವೃತ್ತರಾದ ಬಳಿಕ, ಹಲವು ತಿಂಗಳುಗಳಿಂದ ಆ ಹುದ್ದೆ ಖಾಲಿಬಿದ್ದಿತ್ತು.

Write A Comment