ರಿಯಾದ್: ಇತರ 34 ರಾಷ್ಟ್ರಗಳ ಸಹಕಾರ ದೊಂದಿಗೆ ಭಯೋತ್ಪಾದನೆಯ ವಿರುದ್ಧ ಪ್ರಬಲ ಹೋರಾಟ ನಡೆಸಲಿರುವುದಾಗಿ ಸೌದಿ ಅರೇಬಿಯ ಘೋಷಿಸಿದೆ.
ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟಕ್ಕೆ ಸಹಕಾರ ನೀಡಲು 34 ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಸೌದಿ ತಿಳಿಸಿದೆ.ಸೌದಿ ಅರೇಬಿಯವು ಸೇನಾ ಮೈತ್ರಿ ಮಾಡಿಕೊಳ್ಳಲಿರುವ ರಾಷ್ಟ್ರಗಳಲ್ಲಿ ಈಜಿಪ್ಟ್, ಕತರ್, ಯುಎಇ, ಟರ್ಕಿ, ಮಲೇಶ್ಯ, ಪಾಕಿಸ್ತಾನ, ಅರಬ್ ಹಾಗೂ ಆಫ್ರಿಕನ್ ರಾಷ್ಟ್ರಗಳು ಒಳಗೊಂಡಿವೆ.
ಭಯೋತ್ಪಾದನೆ ವಿರುದ್ಧದ ಹೋರಾಟದ ಭಾಗವಾಗಿ ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಜಂಟಿ ಕಾರ್ಯಾ ಚರಣೆಯ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಐಸಿಸ್ ಉಗ್ರರ ಸಂಘಟನೆ ಸೇರಿದಂತೆ ಇನ್ನಿತರ ಉಗ್ರರ ಗುಂಪುಗಳ ವಿರುದ್ಧ ಹೋರಾಟ ಮುಂದುವರಿಸಲಿ ರುವುದಾಗಿ ಸೌದಿ ಅರೇಬಿಯ ಹೇಳಿದೆ.
ಭಯೋತ್ಪಾದನೆಯು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ವಿಶೇಷವಾಗಿ ಅದು ಮಾನವನ ಬದುಕುವ ಹಕ್ಕು ಹಾಗೂ ಭದ್ರತೆಯ ಹಕ್ಕನು ಉಲ್ಲಂಘಿ ಸುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.