ದುಬೈ, ಡಿ.20: ತುಳು ಸಿನೆಮಾ ರಂಗದಲ್ಲಿ ಹೊಸ ದಾಖಲೆಯನ್ನು ಬರೆದಿರುವ ಹಾಸ್ಯಮಯ ಸೂಪರ್ ಹಿಟ್ ಚಿತ್ರ ‘ಚಾಲಿಪೋಲಿಲು’ ದುಬೈ ಹಾಗೂ ಅಬುಧಾಬಿಯಲ್ಲಿ ಡಿಸೆಂಬರ್ 24-25ರಂದು ತೆರೆ ಕಾಣಲಿದೆ. ಯುಎಇಯಲ್ಲಿರುವ ತುಳು ಅಭಿಮಾನಿಗಳು ಇತಿಹಾಸ ನಿರ್ಮಿಸಿರುವ ಈ ಸಿನೆಮಾವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಡಿಸೆಂಬರ್ 24ರ ಗುರುವಾರ ಮತ್ತು 25ರ ಶುಕ್ರವಾರದಂದು ದುಬೈಯ ಲ್ಯಾಮ್ಸಿ ಪ್ಲಾಝಾದ ಲ್ಯಾಮ್ಸಿ ಸಿನೆಮಾ ಮಂದಿರದಲ್ಲಿ ಸಂಜೆ 4 ಮತ್ತು 5 ಗಂಟೆಗೆ ಎರಡು ಪ್ರದರ್ಶನ ಕಾಣಲಿದೆ. ಜೊತೆಗೆ ಅಬುಧಾಬಿಯ ಎಲ್‌ಡೋರಡೋ ಸಿನೆಮಾ ಮಂದಿರದಲ್ಲಿ ಡಿಸೆಂಬರ್ 24ರಂದು ಗುರುವಾರ ಸಂಜೆ 4 ಗಂಟೆಗೆ ತೆರೆಕಾಣಲಿದೆ.
ಜಯಕಿರಣ ಫಿಲಂಸ್ ಲಾಂಛನದಡಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣದ, ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ‘ಚಾಲಿಪೋಲಿಲು’ ತುಳು ಪ್ರಾದೇಶಿಕ ಸಿನೆಮಾ ಮಂಗಳೂರಿನ ಪಾಂಡೇಶ್ವರದಲ್ಲಿರುವ ಪಿವಿಆರ್‌ನಲ್ಲಿ ಇಂದಿಗೂ 411 ದಿನಗಳ ನಿರಂತರ ಅದ್ದೂರಿಯ ಪ್ರದರ್ಶನವನ್ನು ಕಾಣುವ ಮೂಲಕ ತುಳು ಸಿನೆಮಾ ಜಗತ್ತಿನಲ್ಲಿ ಇನ್ನೆಂದೂ ಅಳಿಸದಂತ ದಾಖಲೆಯ ನಡೆಯನ್ನು ಮುಂದುವರಿಸಿದೆ.
ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್, ಅರ್ಜುನ್ ಕಾಪಿಕಾಡ್, ಸುಂದರ ರೈ ಮಂದಾರ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು, ಚೇತನ್ ರೈ, ಲಕ್ಷ್ಮಣ್ ಕುಮಾರ್ ಮಲ್ಲೂರು, ದಿವ್ಯಾಶ್ರೀ, ಸುರೇಂದ್ರ ಬಂಟ್ವಾಳ್, ಪದ್ಮಜಾರಾವ್ ಸೇರಿದಂತೆ ತುಳು ಸಿನೆಮಾದ ದಿಗ್ಗಜರೆ ಈ ಚಿತ್ರದಲ್ಲಿ ಅತ್ಯುತ್ತಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.
ಯುಎಸ್‌ಎ, ಯುಕೆ ಮತ್ತು ಆಸ್ಟ್ರೇಲಿಯಾದಲ್ಲಿ ಅದ್ದೂರಿಯ ಪ್ರದರ್ಶನ ಕಂಡಿರುವ ‘ಚಾಲಿಪೋಲಿಲು’ ಸಿನೆಮಾ ಉತ್ತಮ ಗುಣಮಟ್ಟ, ಉತ್ತಮ ಕಥೆ, ಸಂದೇಶ, ಹಾಸ್ಯದಿಂದ ಎಲ್ಲ ವರ್ಗದ ಜನರನ್ನೂ ಸೆಳೆಯುವ ಒಂದು ಉತ್ಕೃಷ್ಟ ಮಟ್ಟದ ಸಿನಿಮಾವಾಗಿದೆ. ಮಹಿಳೆಯರನ್ನೂ ಮಕ್ಕಳನ್ನೂ ಇದು ಸಿನಿಮಾ ಮಂದಿರಕ್ಕೆ ಸೆಳೆದಿದೆ.
ಮಂಗಳೂರಿನ ಪೋರಂ ಮಾಲ್‌ನಲ್ಲಿ ನಡೆದ ತುಳು ಚಿತ್ರೋತ್ಸವ 2014ರ ವಿಭಾಗದಲ್ಲಿ ‘ಚಾಲಿಪೋಲಿಲು’ 8 ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಸಾಧನೆಗೆ ಒಂದು ಅಧಿಕೃತ ಮನ್ನಣೆ ಗಳಿಸಿದೆ. ಉತ್ಪಲ್ ನಯನಾರ್ ಅವರ ಛಾಯಾಗ್ರಹಣ, ವಿ. ಮನೋಹರ್ ಅವರ ಸಂಗೀತ, ಮಣಿಕಾಂತ್ ಕದ್ರಿಯವರ ಹಿನ್ನೆಲೆ ಸಂಗೀತವಂತೂ ಉತ್ತಮವಾಗಿ ಮೂಡಿಬಂದಿದೆ.
ಎರಡೂವರೆ ಗಂಟೆಗಳ ಈ ಹಾಸ್ಯಭರಿತ ಸಿನೆಮಾವನ್ನು ಸಂಸಾರ ಸಹಿತವಾಗಿ ಬಂದು ನೋಡಬಹುದಾಗಿದ್ದು, ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನೂರು ಮೋಹನ್ ರೈ(0561313062) ಅವರನ್ನು ಸಂಪರ್ಕಿಸಬಹುದು.
ಟಿಕೆಟ್‌ಗಾಗಿ ಸಂಪರ್ಕಿಸಿ:
ಜಯಂತ್ ಶೆಟ್ಟಿ-0506590986, ದೇವ್‌ದಾಸ್-0558898655, ಅನಿಲ್-0556448973
ದುಬೈ: ಶೆಟ್ಟಿ ಲಂಚ್ ಹೋಮ್ ಕರಾಮ, ವಿನ್ನಿಸ್ ರೆಸ್ಟೋರೆಂಟ್ ಕರಾಮ, ಅರಬ್ ಉಡುಪಿ ರೆಸ್ಟೋರೆಂಟ್ ಬರ್‌ದುಬೈ, ಸ್ವಾದಿಸ್ಟ್ ರೆಸ್ಟೋರೆಂಟ್ ಕರಾಮ, ಉಡುಪಿ ಸಾಗರ್ ರೆಸ್ಟೋರೆಂಟ್ ಬರ್‌ದುಬೈ, ಅಲ್‌ವಿನ್ಸ್ ರೆಸ್ಟೋರೆಂಟ್ ಕರಾಮ, ವೀನಸ್ ರೆಸ್ಟೋರೆಂಟ್ ಕರಾಮ, ಕ್ವಿಕ್‌ಬೈಟ್ ರೆಸ್ಟೋರೆಂಟ್ ದೇರಾ.
ಅಲ್‌ಗಿಸೆಸ್: ವೀನಸ್ ರೆಸ್ಟೋರೆಂಟ್(ಅಂಬಾ ರೆಸ್ಟೋರೆಂಟ್), ಕ್ವಿಕ್‌ಬೈಟ್ ರೆಸ್ಟೋರೆಂಟ್.
ಶಾರ್ಜಾ: ವುಡ್‌ಲ್ಯಾಂಡ್ಸ್ ರೆಸ್ಟೋರೆಂಟ್
ಅಬುಧಾಬಿ: ಸರ್ವೋತ್ತಮ ಶೆಟ್ಟಿ-0506125464, ಮನೋಹರ್ ತೋನ್ಸೆ-0505212079, ಪ್ರದೀಪ್ ಕಿರೋಡಿಯನ್-0504953432, ಪ್ರಶಾಂತ್ ಹೆಗ್ಡೆ, 0505213883, ಗಣೇಶ್ ರೈ-0505273714, ಸುರೇಶ್ ಸಾಲ್ಯಾನ್-0508192637, ಸುಶಾನ್ ರೈ-0557015977.