ರಾಷ್ಟ್ರೀಯ

ಮ್ಯಾಂಡೊಲಿನ್ ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ

Pinterest LinkedIn Tumblr

srinivas_2116049e

ಚೆನ್ನೈ, ಸೆ.19: ಖ್ಯಾತ ಮ್ಯಾಂಡೊಲಿನ್ ವಾದಕ ಉಪ್ಪಾಲಪು ಶ್ರೀನಿವಾಸ್ ದೀರ್ಘ ಕಾಲದ ಅಸೌಖ್ಯದ ಕಾರಣ ಇಲ್ಲಿನ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ‘ಮ್ಯಾಂಡೊಲಿನ್ ಶ್ರೀನಿವಾಸ್’ ಎಂಬ ಹೆಸರಿನಿಂದಲೇ ಕರೆಯಲ್ಪಡುವ 45ರ ಹರೆಯದ ಶೀನಿವಾಸ್ ದಕ್ಷಿಣ ಭಾರತದ ಕರ್ನಾಟಿಕ್ ಸಂಗೀತ ಕ್ಷೇತ್ರದಲ್ಲಿ ಸುಪ್ರಸಿದ್ಧ ಮ್ಯಾಂಡೋಲಿನ್ ವಾದಕರಾಗಿ ಹೆಸರುಗಳಿಸಿದ್ದರು.

ಪಿತ್ತಜನಕಾಂಗ ಸಂಬಂಧಿತ ರೋಗದಿಂದ ಅವರು ಬಳಲುತ್ತಿದ್ದರು. ಜಾನ್ ಮೆಕ್‌ಲಾಗ್ಲಿನ್ ಹಾಗೂ ಮೈಕೆಲ್ ನೈಮಾನ್ ಎಂಬಿತ್ಯಾದಿ ಹಲವು ಜಾಗತಿಕ ಕಲಾವಿದರಾದ ಜೊತೆಗೂಡಿ ಎಲೆಕ್ಟ್ರಿಕ್ ಮ್ಯಾಂಡೊಲಿನ್‌ನ್ನು ಶ್ರೀನಿವಾಸನ್ ನುಡಿಸಿದ್ದರು. 1998ರಲ್ಲಿ ಶ್ರೀನಿವಾಸನ್‌ರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು.

2010ರಲ್ಲಿ ಇವರು ಸಂಗೀತ್ ನಾಟಕ್ ಅಕಾಡಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೂ ಅಲ್ಲದೆ ಇನ್ನಿತರ ಹತ್ತು ಹಲವು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದರು. ಸಂಗೀತ ಸಂಯೋಜಕ ಎ.ಆರ್.ರಹ್ಮಾನ್ ಸೇರಿದಂತೆ ಹಲವು ಖ್ಯಾತನಾಮರು ಶ್ರೀನಿವಾಸ್‌ರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Write A Comment