ನವದೆಹಲಿ, ಸೆ.20: ಭಾರತ ಮತ್ತು ಚೀನಾ ನಡುವೆ ಎಷ್ಟೇ ಮಾತುಕತೆ ನಡೆದು ಶಾಂತಿಮಂತ್ರ ಪಠಿಸಿದರೂ ಚೀನಾ ಮಾತ್ರ ತನ್ನ ನರಿ ಬುದ್ಧಿ ತೋರಿಸುವುದನ್ನು ಬಿಡುವುದಿಲ್ಲ. ಎರಡು ದಿನಗಳ ಹಿಂದೆಯಷ್ಟೆ ಲಡಾಕ್‍ನ ಚೂಮರ್ ಪ್ರದೇಶವನ್ನು ಅತಿಕ್ರಮಣವಾಗಿ ಪ್ರವೇಶ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ಸೈನಿಕರು ಪುನಃ ಇಂದು ಕೂಡ ಭಾರತದ ಗಡಿಯೊಳಗೆ ಒಳನುಸುಳಲು ಯತ್ನಿಸಿದ್ದಾರೆ.
ಗುರುವಾರ ಲಡಾಕ್‍ನ ಚೂಮರ್ ಪ್ರದೇಶಕ್ಕೆ ಚೀನಾ ಪೀಪಲ್ ಲಿಬರೇಷನ್ ಆರ್ಮಿಯ ಸುಮಾರು ಒಂದು ಸಾವಿರ ಸೈನಿಕರು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು. ನಿನ್ನೆಯಷ್ಟೆ ಈ ಸೈನಿಕರು ಗಡಿ ಪ್ರದೇಶ ಬಿಟ್ಟು ಹಿಂತಿರುಗಿದ್ದರು ಎಂದು ಹೇಳಲಾಗಿತ್ತು. ಆದರೆ, ಇಂದು ಬೆಳಿಗ್ಗೆ ಪುನಃ ಒಂದು ಸಾವಿರ ಸೈನಿಕರು ಚೋಮರ್ ಪ್ರದೇಶ ಮಾಡಿದ್ದಾಗಿ ಸೇನಾ ಮೂಲಗಳು ಖಚಿತಪಡಿಸಿವೆ.
ಅಂತಾರಾಷ್ಟ್ರೀಯ ಗಡಿ ರೇಖೆಗೆ ಹೊಂದಿಕೊಂಡಿರುವ ಚೋಮರ್ ಪ್ರದೇಶದಲ್ಲಿ ಒಂದು ಸಾವಿರ ಸೈನಿಕರು ಬೀಡು ಬಿಟ್ಟಿದ್ದಾಗಿ ವರದಿಯಾಗಿದೆ. ಭಾರತದ ಸೈನಿಕರು ಕೂಡ ಇಲ್ಲಿ ಜಮಾವಣೆ ಮಾಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.