ಅಂತರಾಷ್ಟ್ರೀಯ

ಅಮೆರಿಕ ಪ್ರವಾಸ : ನರೇಂದ್ರ ಮೋದಿ ಉಪವಾಸ..!

Pinterest LinkedIn Tumblr

Modi-100

ನವದೆಹಲಿ, ಸೆ.22: ಅಮೆರಿಕಕ್ಕೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಬಾಮ ಭೇಟಿ ಹಾಗೂ ಔತಣಕೂಟದಲ್ಲಿ ನವರಾತ್ರಿ ಪ್ರಯುಕ್ತ ಉಪವಾಸ ವ್ರತವನ್ನು ಕೈ ಬಿಡದಿರಲು ತೀರ್ಮಾನಿಸಿದ್ದಾರೆ. ಸೆ.25ರಿಂದ ಅ.3ರವರೆಗೆ ನವರಾತ್ರಿ ಉತ್ಸವ ದೇಶಾದ್ಯಂತ ನಡೆಯಲಿದೆ. ಕಳೆದ 4 ದಶಕಗಳಿಂದ ನರೇಂದ್ರ ಮೋದಿ ಅವರು ನವರಾತ್ರಿ ಸಂದರ್ಭದಲ್ಲಿ ಹಣ್ಣು, ಹಂಪಲುಗಳನ್ನು ಹೊರತುಪಡಿಸಿದರೆ ಬೇರ್ಯಾವ ಭೋಜನ ಸ್ವೀಕರಿಸುವುದಿಲ್ಲ. ಪ್ರಧಾನಿ ಆದ ಬಳಿಕ ಮೋದಿ ಅವರು ಅಮೆರಿಕಕ್ಕೆ ತೆರಳುತ್ತಿದ್ದು, ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅಮೆರಿಕ ಬರಾಕ್ ಒಬಾಮ ಸೇರಿದಂತೆ ಅನೇಕ… ಗಣ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸುವರು.

ಅಮೆರಿಕಕ್ಕೆ ತೆರಳುತ್ತಿದ್ದರೂ ಮೋದಿ ಅವರು ಕಳೆದ 4 ದಶಕಗಳಿಂದ ನಡೆಸುತ್ತಿರುವ ಸಂಪ್ರದಾಯಗಳನ್ನು ಈ ಬಾರಿ ಮುರಿಯುವುದಿಲ್ಲ. ಅವರು ಎಲ್ಲೇ ಇದ್ದರೂ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮುಂದುವರೆಯಲಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆ.

ನ್ಯೂಯಾರ್ಕ್‍ನ ಮೆಡಿಷನ್ ಗಾರ್ಡನ್‍ನಲ್ಲಿ ಮೋದಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ವೇಳೆಯು ಭೋಜನ ಸ್ವೀಕರಿಸುವುದಿಲ್ಲ. 9 ದಿನಗಳ ಕಾಲ ಅವರು ಹಣ್ಣು, ಪಾನೀಯ ಹೊರತು ಪಡಿಸಿದರೆ ಮತ್ಯಾವ ಆಹಾರವನ್ನು ಸೇವಿಸುವುದಿಲ್ಲ. ಈ ಬಗ್ಗೆ ಯಾರೂ ಅನಗತ್ಯ ಒತ್ತಡ ಹಾಕಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಮೆರಿಕದಿಂದ ನಮಗೆ ಉನ್ನತ ನಿಯೋಗವೊಂದು ಔತಣಕೂಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿತ್ತು. ಈಗಾಗಲೇ ಇದರ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ ಯಾರೊಬ್ಬರೂ ಒತ್ತಡ ಹಾಕಬಾರದು. ಸೆ.25ರಿಂದ ಆ.3ರವರೆಗೆ ಪ್ರಧಾನಿ ಅವರು ಉಪವಾಸ ವ್ರತ ಮಾಡುತ್ತಿರುವುದರಿಂದ ಹಸ್ತಕ್ಷೇಪ ನಡೆಸದಂತೆ ಸೂಚಿಸಲಾಗಿದೆ.

Write A Comment