ರಾಷ್ಟ್ರೀಯ

ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣವಚನ

Pinterest LinkedIn Tumblr

Panneer-selvam

ಚೆನ್ನೈ, ಸೆ.29: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೆ.ಜಯಲಲಿತಾ ಅವರ ಆಪ್ತ ಹಾಗೂ ಹಣಕಾಸು ಸಚಿವ ಓ.ಪನ್ನೀರ್ ಸೆಲ್ವಂ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇಂದು ಬೆಳಿಗ್ಗೆ 11 ಗಂಟೆಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಮಿಳುನಾಡಿನ 17ನೇ ಮುಖ್ಯಮಂತ್ರಿಯಾಗಿ ಓ.ಪನ್ನೀರ್ ಸೆಲ್ವಂ ಅವರು ರಾಜ್ಯಪಾಲ ಕೆ.ರೋಸಯ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಚಿವರು, ಶಾಸಕರು ಹಾಗೂ ಹಲವು ಗಣ್ಯರು ಭಾಗಿಯಾಗಿದ್ದರು. ಓ.ಪನ್ನೀರ್ ಸೆಲ್ವಂ ಅವರು ಎರಡನೆಯ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಿದ್ದು, ಈ ಮುನ್ನ 2001ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ತಮ್ಮ ಪದವಿಯಲ್ಲಿ ಮುಂದುವೆರಯಲು ನಿರ್ಬಂಧ ವಿಧಿಸಿದ್ದರಿಂದ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಓ.ಪನ್ನೀರ್ ಸೆಲ್ವಂ ಚೊಚ್ಚಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ಅವರನ್ನು ಜಯಲಲಿತಾ ಕೈಗೊಂಬೆ ಎಂದೇ ಹೇಳಲಾಗುತ್ತಿತ್ತು.

ಅದಾದ 13 ವರ್ಷಗಳ ನಂತರ ಜೆ.ಜಯಲಲಿತಾ ಮತ್ತೊಮ್ಮೆ ನ್ಯಾಯಾಲಯದ ತೀರ್ಪಿನಿಂದ ತಮ್ಮ ಪದವಿಯನ್ನು ತ್ಯಜಿಸುವಂತಾಗಿದ್ದು, ಮತ್ತೆ ಅವರ ಆಪ್ತರಾಗಿರುವ ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ.

Write A Comment