ರಾಷ್ಟ್ರೀಯ

ಮಹಿಳಾ ಸ್ನೇಹಿ ‘ವಿವಾಹ ಕಾನೂನು’ ಜಾರಿಗೆ ಕೇಂದ್ರ ಚಿಂತನೆ

Pinterest LinkedIn Tumblr

Hindu-marriage-act

ನವದೆಹಲಿ: ವಿಚ್ಛೇದಿತ ಮದುವೆ ಕಾನೂನನ್ನು ಮಹಿಳಾ ಸ್ನೇಹಿ ಕಾನೂನಾಗಿ ತಿದ್ದುಪಡಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಈ ವಿಚಾರವಾಗಿ  ಸಂಸತ್‌ನಲ್ಲಿ ಮಸೂದೆ  ಪ್ರಸ್ತಾಪಿಸಲು ಚಿಂತನೆ ನಡೆಸುತ್ತಿದೆ.

ಕಾನೂನು ಸಚಿವಾಲಯವು ಮದುವೆಯ ಕಾನೂನು ಕುರಿತಂತೆ ಅಂತರ್ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ್ದು, ಅಂತರ್ ಸಚಿವಾಲಯದ ಅಂತಿಮ ಪ್ರತಿಕ್ರಿಯೆ ಪಡೆದ ನಂತರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ಈ ಕುರಿತು ಕೇಂದ್ರ ಸಂಪುಟದಲ್ಲಿ ಪ್ರಸ್ತಾಪನೆ ಮುಂದಿಡಲಿದ್ದಾರೆ ಎಂದು ಹೇಳಿದೆ.

ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಏನಿದೆ?

1955 13ನೇ ಸೆಕ್ಷನ್‌ಗೆ ಹಾಗೂ ವಿಶೇಷ ವಿವಾಹ ಕಾನೂನು 1954ರ ಕಾನೂನಿಗೆ ಕೆಲವು ಸೆಕ್ಷನ್‌ಗಳನ್ನು ಸೇರಿಸಲಾಗಿತ್ತು. ಮೊದಲು ಜಾರಿಯಲ್ಲಿದ್ದ ಕಾನೂನಿನಲ್ಲಿ ಮದುವೆ ಮುರಿದು ಬಿದ್ದಿದ್ದರೆ ಅಥವಾ ಪತಿ-ಪತ್ನಿಯೊಂದಿಗೆ ಬದುಕಲು ಸಾಧ್ಯವೇ ಇಲ್ಲದಿದ್ದರೆ, ಪ್ರಯೋಜನವಿಲ್ಲದ ವಿವಾಹ ಎನ್ನುವ ಕಾರಣಗಳಿಗೆ ವಿಚ್ಛೇದನ ಸಿಗುತ್ತಿರಲಿಲ್ಲ.

ಆದರೆ ಈಗ ತಿದ್ದುಪಡಿಯಾಗಿರುವ ಮಸೂದೆಯಲ್ಲಿ ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಮದುವೆಗಳಿಗೆ ವಿಚ್ಛೇದನ ನೀಡುವಂತೆ ಪುರುಷನಾಗಲೀ, ಮಹಿಳೆಯಾಗಲೀ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವವರು ಕನಿಷ್ಠ ಮೂರು ವರ್ಷಗಳ ಕಾಲ ಇಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸ ಇದ್ದಿರಬಾರದು. ಇಂತಹ ಪ್ರಕರಣಗಳನ್ನು ನ್ಯಾಯಾಲಯವು ಪರಿಶೀಲಿಸಿ ಕಾರಣ ಸರಿಯಿದೆ ಎಂದು ಕಂಡುಬಂದರೆ ವಿಚ್ಛೇದನ ನೀಡಬಹುದಾಗಿದೆ.

ಇಂತಹ ವಿಚ್ಛೇದನದಿಂದ ಮಹಿಳೆ ಮತ್ತು ಮಕ್ಕಳು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಾದರೆ ಆ ಮಹಿಳೆಯು ವಿಚ್ಛೇದನವನ್ನು ವಿರೋಧಿಸಬಹುದು. ಪುರುಷನು ವಿಚ್ಛೇದನಕ್ಕಾಗಿ ಹಾಕಿರುವ ಅರ್ಜಿಯನ್ನು ಪರಿಗಣಿಸಿ ಆತನು ಹೆಂಡತಿ ಮತ್ತು ಮಕ್ಕಳಿಗೆ ಆರ್ಥಿಕ ಸೌಲಭ್ಯ ನೀಡುತ್ತಿದ್ದಾನೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಬರೆಯಲಾಗಿದೆ.

ತಿದ್ದು ಪಡಿಗೆ ಕಾರಣ?

ಸ್ಮೃತಿ ಶಿಂಧೆ ಎನ್ನುವವರು ನ್ಯಾಯಾಲವನ್ನು ವಿಚ್ಛೇದನ ಕುರಿತಂತೆ ದಂಪತಿಗಳು ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಅರ್ಜಿ ಹಾಕಿದ್ದರೂ ನಂತರ ಒಬ್ಬರು ಒಪ್ಪಿಗೆಯನ್ನು ಹಿಂತೆಗೆದುಕೊಂಡರೆ ಅಥವಾ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ವಿಚ್ಛೇದನವನ್ನು ಕೊಡದಿರುವುದು ಎಷ್ಟು ಸೂಕ್ತ? ಅಲ್ಲದೇ, ಅಸಹನೀಯ ಪರಿಸ್ಥಿತಿಯಲ್ಲಿರುವ ಹೆಣ್ಣು ಮಕ್ಕಳಿಗೆ ಇದೊಂದೇ ಕಾರಣಕ್ಕೆ ವಿಚ್ಛೇದನ ನೀಡದೆ ಆಕೆಯನ್ನು ಮದುವೆಯ ಪರಿಧಿಯೊಳಗೆ ಮುಂದುವರಿಯುವಂತೆ ಒತ್ತಡ ಹೇರುವುದು ನ್ಯಾಯವೇ? ಎಂದು ನ್ಯಾಯಾಲಯವನ್ನು ಕೇಳಿದ್ದರು.

ಸ್ಮೃತಿ ಕೇಳಿದ ಪ್ರಶ್ನೆಗಳಿಗೆ ಕಾನೂನಿನಲ್ಲಿ ಉತ್ತರ ಸಿಗದಿದ್ದಾಗ ನ್ಯಾಯಾಲಯವು ನಿರ್ದೇಶನ ನೀಡುವಂತೆ ಶಾಸಕಾಂಗವನ್ನು ಕೋರಿತ್ತು. ವಿವಾಹ ವಿಚ್ಛೇದನ ಕುರಿತಂತೆ ಶಾಸಕಾಂಗವು ಕಾನೂನನ್ನು ಪರಿಶೀಲಿಸಿ ತಿದ್ದುಪಡಿ ತರಲು ಮುಂದಾಗಿತ್ತು. ಇದರಿಂದ 2010ರಲ್ಲಿ ವಿವಾಹ ಕಾನೂನು ತಿದ್ದುಪಡಿ ಕರಡು ಮಸೂದೆಯನ್ನು ಪ್ರಸ್ತುತ ಪಡಿಸಲಾಗಿತ್ತು.

Write A Comment