ರಾಷ್ಟ್ರೀಯ

ಮಹಿಳಾ ಕೈದಿಗಳಿಗೆ ಸೆಕ್ಸ್ ವಿವಾದ: ಪ್ರತಿಕ್ರಿಯಿಸಲು ಎನ್‌ಸಿಡಬ್ಲ್ಯೂಮುಖ್ಯಸ್ಥೆ ನಿರಾಕರಣೆ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ

Pinterest LinkedIn Tumblr

lalitha-kumaramangalam

ನಾಗಾಲ್ಯಾಂಡ್: ಸೆಂಟ್ರ ಲ್ ಜೈಲಿನ ವಾರ್ಡನ್ ಗಳು ಮಹಿಳಾ ಕೈದಿಗಳಿಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ನಿರಾಕರಿಸಿದ್ದಾರೆ.

ಶನಿವಾರ ಮತ್ತು ಭಾನುವಾರದ ದಿನದಂದು ಕಛೇರಿ ರಜೆ ಇರುತ್ತದೆ. ಒಂದು ವೇಳೆ ಆ ದಿನದಂದು ನಾವು ಕೆಲಸ ಮಾಡಿದರೂ ಪ್ರಕರಣಗಳ ಸಂಪೂರ್ಣ ಮಾಹಿತಿ ಸೋಮವಾರದ ದಿನದಂದೇ ದೊರೆಯುವುದು ಎಂದಿದ್ದಾರೆ.

ಮಹಿಳೆಯರ ಪರವಾಗಿ ಕೆಲಸ ಮಾಡಲು ಇರುವ ಇಂತಹ ಆಯೋಗಗಳೇ ಬೇಜಾವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಿಡಿದು ಎಲ್ಲಿ ಹೋಗಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದ್ದು, ಲಲಿತಾ ಅವರ ಈ ಪ್ರತಿಕ್ರಿಯೆಗೆ ದೇಶಾದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರಿನ ಸೆಂಟ್ರಲ್ ಜೈಲಿನ ಪುರುಷ ಕೈದಿಗಳೊಂದಿಗೆ ಸೆಕ್ಸ್ ಮಾಡುವಂತೆ ಅಲ್ಲಿನ ವಾರ್ಡನ್‌ಗಳು ಮಹಿಳಾ ಕೈದಿ ಮೇಲೆ ಒತ್ತಡ ಹೇರುತ್ತಿದ್ದು, ಸೆಕ್ಸ್ ಮಾಡಲಿಚ್ಛಿಸುವ ಪುರುಷರಿಂದ ವಾರ್ಡನ್‌ಗಳು ಹಣ ಪಡೆಯುತ್ತಿದ್ದಾರೆ. ವಾರ್ಡನ್‌ಗಳು ಮಹಿಳಾ ಕೈದಿಗಳನ್ನು ಮೃಗಗಳಂತೆ ನೋಡುತ್ತಿದ್ದು, ಮಾನಸಿಕ ಹಾಗೂ ದೈಹಿಕವಾಗಿ ನೋವನ್ನುಂಟು ಮಾಡುತ್ತಿದ್ದಾರೆ. ಅಲ್ಲದೇ, ಸಂಬಂಧಿಕರನ್ನು ಭೇಟಿ ಮಾಡುವುದಕ್ಕೂ ವಾರ್ಡನ್‌ಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಕೈದಿಗಳು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು.

Write A Comment