ರಾಷ್ಟ್ರೀಯ

ರಾಂಪಾಲ್ ಆಶ್ರಮದಲ್ಲಿ 4 ಶವ ಪತ್ತೆ: ಸಾವಿರಾರು ಅನುಯಾಯಿಗಳನ್ನು ಆಶ್ರಮದಿಂದ ತೆರವು ಮಾಡಿದ ಪೊಲೀಸರು

Pinterest LinkedIn Tumblr

Rampal-Ashram

ಹಿಸ್ಸಾರ್: ವಿವಾದಿತ ದೇವಮಾನ ಬಾಬಾ ರಾಂಪಾಲ್ ನ ಬಂಧನಕ್ಕಾಗಿ ಹರ್ಯಾಣ ಪೊಲೀಸರು ನಡೆಸಿದ ಕಾರ್ಯಾಚರಣೆ ಹಿಂಸಾ ರೂಪಕ್ಕೆ ತಿರುಗಿದ ಪರಿಣಾಮ 6 ಜನರು ಮೃತಪಟ್ಟಿದ್ದಾರೆ.

ನಿನ್ನೆ ಬೆಳ್ಳಗ್ಗೆಯಿಂದಲೇ ಸತತವಾಗಿ ನಡೆಯುತ್ತಿರುವ ಕಾರ್ಯಾಚರಣೆಗೆ ಆಶ್ರಮದ ಅನುಯಾಯಿಗಳು ಮತ್ತು ರಾಂಪಾಲ್ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪೊಲೀಸರ ಕಾರ್ಯಾಚರಣೆ ಇದೀಗ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಪೊಲೀಸ್ ಮತ್ತು ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಈ ವರೆಗೂ ಸುಮಾರು ಆರು ಮಂದಿ ಸಾವನ್ನಪ್ಪಿದ್ದು, 4 ಮೃತ ದೇಹಗಳು ಪತ್ತೆಯಾಗಿವೆ.

ಆಶ್ರಮಮದ ಬಲ ಭಾಗದಲ್ಲಿರುವ ಆವರಣದಲ್ಲಿ ದೊರೆತ ನಾಲ್ಕು ಮೃತ ಮಹಿಳೆಯರ ಶವವನ್ನು ಆಶ್ರಮದ ಸಿಬ್ಬಂದಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಲ್ಲದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 18 ತಿಂಗಳ ಒಂದು ಮಗು ಸೇರಿದಂತೆ ಓರ್ವ ಬಾಲಕಿ ಕೂಡ ಸಾವನ್ನಪ್ಪಿರುವ ಶಂಕೆ ಇದ್ದು, ಈ ವರೆಗೂ  ಅದರ ಬಗೆಗಿನ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.

ಮೃತರನ್ನು ಸಂತೋಷ್, ಮಾಲಕಿತ್, ರಾಜಬಾಲ ಮತ್ತು ಸವಿತಾ ಎಂದು ಗುರುತಿಸಲಾಗಿದೆ. ಆದರೆ ಅವರ ದೇಹದ ಮೇಲೆ ಯಾವುದೇ ರೀತಿಯ ಗುರುತು ಕೂಡ ಪತ್ತೆಯಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಆಶ್ರಮದಲ್ಲಿ ಇನ್ನೂ ಸುಮಾರು 5 ಸಾವಿರ ಬೆಂಬಲಿಗರಿರುವ ಶಂಕೆ ಇದ್ದು, ಅವರೆಲ್ಲರನ್ನೂ ತೆರವುಗೊಳಿಸಲಾಗುತ್ತಿದೆ. ಪ್ರಸ್ತುತ ಸುಮಾರು 35 ಬಸ್ ಗಳಲ್ಲಿ ಬೆಂಬಲಿಗರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹರ್ಯಾಣ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಮಹಿಳೆಯರನ್ನು ಮತ್ತು ಮಕ್ಕಳನ್ನು ತಡೆಗೋಡೆಯಾಗಿ ಬಳಕೆ ಮಾಡುತ್ತಿರುವ ರಾಂಪಾಲ್

ಇನ್ನು ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧನ ಭೀತಿ ಎದುರಿಸುತ್ತಿರುವ ವಿವಾದಿತ ದೇವಮಾನವ ಬಾಬಾರಾಂಪಾಲ್ ತನ್ನ ಮಹಿಳಾ ಭಕ್ತರನ್ನೇ ತನ್ನ ತಡೆಗೋಡೆಯಾಗಿ ನಿರ್ಮಿಸಿಕೊಂಡಿದ್ದಾನೆ. ಆಶ್ರಮದ ತಡೆಗೋಡೆಯನ್ನು ಹೊಡೆದು ಹಾಕಿದ್ದ ಪೊಲೀಸ ಆಶ್ರಮದಲ್ಲಿ ಶೋಧ ಕಾರ್ಯ ನಡೆಸಿದರಾದರೂ ಅಲ್ಲಿ ಬಾಬಾ ರಾಂಪಾಲ್ ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಕೂಡ ಪೊಲೀಸರು ತಮ್ಮ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ಪೊಲೀಸ್ ಗುಂಡಿನಿಂದಾಗಿ ಸಾವು ಸಂಭವಿಸಿಲ್ಲ

ಇನ್ನು ಘಟನೆ ಕುರಿತಂತೆ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹರ್ಯಾಣ ಡಿಜಿಪಿ ಶ್ರೀನಿವಾಸ್ ವಸಿಷ್ಟ ಅವರು, ಆಶ್ರಮದಲ್ಲಿ ನಡೆದ ಹಿಂಸಾಚಾರದಲ್ಲಿ 6 ಜನರು ಮೃತಪಟ್ಟಿರುವುದು ಖಚಿತವಾಗಿದೆ. ಆದರೆ ಎಲ್ಲ ಸಾವು ಪೊಲೀಸ್ ಗುಂಡಿನಿಂದಾಗಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಶವಗಳ ಮೇಲೆ ಪೊಲೀಸ್ ಗುಂಡೇಟಿನ ಯಾವುದೇ ಗುರುತುಗಳು ಪತ್ತೆಯಾಗಿಲ್ಲ  ಎಂದು ಹೇಳಿದ್ದಾರೆ.

Write A Comment