ಅಲಿಘರ್: ಆದ್ದೂರಿಯಾಗಿ ನಡೆಯುತ್ತಿದ್ದ ವಿವಾಹ ಸಂದರ್ಭದ ವೇಳೆ ವರನ ಅತ್ತಿಗೆ ಎಲ್ಲರೆದುರೇ ಆತನಿಗೆ ಗಾಢವಾಗಿ ಮುತ್ತಿಕ್ಕಿದ್ದಲ್ಲದೇ ನೃತ್ಯ ಸಹ ಮಾಡಿದ್ದನ್ನು ಕಂಡು ಕಣ್ಣು ಕೆಂಪಗಾಗಿಸಿಕೊಂಡ ವಧುವಿನ ಕಡೆಯವರು ಮದುವೆ ಮಂಟಪದಲ್ಲೇ ಹೊಡೆದಾಟಕ್ಕಿಳಿದು ಅಕ್ಷರಶಃ ಮದುವೆ ಮನೆ ರಣರಂಗವಾಗಿ ಪರಿವರ್ತನೆಯಾದ ಘಟನೆ ನಡೆದಿದೆ.
ಅಲಿಘರ್ ನ ಕಾಯಿರ್ ರಸ್ತೆಯಲ್ಲಿ ನಡೆಯುತ್ತಿದ್ದ ಈ ವಿವಾಹದ ಸಂದರ್ಭದಲ್ಲಿ ವರನ ಅತ್ತಿಗೆ ತನ್ನ ಮೈದುನನೊಂದಿಗೆ ಅಷ್ಟು ಸಲಿಗೆ ತೋರಿದ್ದನ್ನು ಕಂಡ ವಧುವಿನ ಕಡೆಯವರು, ವರ ಮತ್ತಾತನ ಕಡೆಯವರಿಗೆ ಹಿಗ್ಗಾಮುಗ್ಗಾ ಧಳಿಸಿದ್ದಾರೆ. ಅಲ್ಲದೇ ತನಗೆ ಈ ವಿವಾಹ ಬಿಲ್ ಕುಲ್ ಬೇಡವೆಂದು ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಘಟನೆ ಕಂಡು ಮದುವೆಗೆ ಬಂದಿದ್ದ ಮೇಯರ್ ಸಹಿತ ಹಲವರು ಮೂಕ ಪ್ರೇಕ್ಷಕರಾಗಿದ್ದಾರೆ.
ವರ ಹಾಗೂ ವಧು ಇಬ್ಬರ ಕಡೆಯವರು ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದು ಸುಶಿಕ್ಷಿತ ಹಿನ್ನಲೆಯನ್ನು ಹೊಂದಿದ್ದರು. ವರನ ಅತ್ತಿಗೆ ಆತನ ಸೊಂಟ ಬಳಸಿ ಅತ್ಯಂತ ಸಲುಗೆಯಿಂದ ನೃತ್ಯ ಮಾಡುತ್ತಿದ್ದುದು ಹಾಗೂ ಮದುವೆ ಹಿಂದಿನ ರಾತ್ರಿ ಆಕೆ ವರನ ಜೊತೆ ಗುಸುಗುಸು ಮಾತನಾಡುತ್ತಿದ್ದದು ಇವೆಲ್ಲವೂ ವಧುವಿನ ಕಡೆಯವರಿಗೆ ಅವರಿಬ್ಬರ ಮಧ್ಯೆ ಏನೋ ಇದೆ ಎಂಬ ಅನುಮಾನ ತರಿಸಿತ್ತು.
ಯಾವಾಗ ವರನ ಅತ್ತಿಗೆ ತನ್ನ ಮೈದುನನಿಗೆ ಮದುವೆ ಮಂಟಪದಲ್ಲೇ ಅದೂ ವಧುವಿನ ಎದುರೇ ಗಾಢವಾಗಿ ಚುಂಬಿಸಿದಳೋ ಇದನ್ನು ನೋಡಿ ವಧುವಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಆಕೆ ತನಗೆ ಈ ವಿವಾಹ ಬೇಡವೆಂದು ಅಲ್ಲೇ ತಿಳಿಸಿದ್ದಾಳೆ. ಅಲ್ಲದೇ ವರನ ಕಡೆಯವರೊಂದಿಗೆ ಹೊಡೆದಾಟಕ್ಕೆ ನಿಂತ ವಧುವಿನ ಕಡೆಯವರು ಸಿಕ್ಕಸಿಕ್ಕವರಿಗೆ ಚೆನ್ನಾಗಿ ಥಳಿಸಿದರಲ್ಲದೇ ಅಂತಿಮವಾಗಿ ವರನನ್ನು ತಮ್ಮ ಬಂಧಿಯಾಗಿರಿಸಿಕೊಂಡರು.
ಈಗ ವಿವಾದ ಠಾಣೆಯ ಮೆಟ್ಟಿಲೇರಿದ್ದು ಎರಡೂ ಕಡೆಯವರಿಗೆ ಅತ್ಮೀಯರಾಗಿರುವ ಗಣ್ಯರು ವಿವಾದವನ್ನು ನಿಮ್ಮನಿಮ್ಮಲೇ ಬಗೆ ಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರಂತೆ.
1 Comment
Supar sir nema varadi