ಲಕ್ನೋ, ಡಿ.6: ವಿದ್ಯುತ್ ಕದಿಯುವವರನ್ನು ಗಲ್ಲಿಗೆ ಹಾಕಬೇಕು ಎಂದು ಈ ಮೊದಲು ಹೇಳಿದ್ದ ಮಹಾರಾಷ್ಟ್ರ ಸಚಿವ ನಾಯಕ್ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯುತ್ ಚೋರರನ್ನು ಸಾರ್ವಜನಿಕವಾಗಿ ಬೂಟಿನಿಂದ ಹೊಡೆಯಿರಿ ಎಂದು ಫರ್ಮಾನು ಹೊರಡಿಸಿದ್ದಾರೆ.
ವಿದ್ಯುತ್ ಕಳ್ಳತನ ಮಾಡುವ ವರು ಭಾರೀ ಅಕ್ಷಮ್ಯ ಅಪರಾಧ ಮಾಡುತ್ತಿದ್ದು, ಅವರನ್ನು ಗಲ್ಲಿಗೇ ರಿಸಬೇಕೆಂದು ಹೇಳಿದ್ದೆ. ಆದರೆ, ಅದೇ ಹೇಳಿಕೆಯನ್ನು ಸ್ವಲ್ಪ ಸುಧಾರಿಸಿ ಹೇಳುವುದಾದರೆ ಅಂಥವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ವಿದ್ಯುತ್ ಕದಿಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಹತಾಶರಾದ ಸಚಿವರು ಈ ಹೇಳಿಕೆ ನೀಡಿದ್ದಾರೆ.