ಅಂತರಾಷ್ಟ್ರೀಯ

ಸಿಡ್ನಿ ಕೆಫೆ ಮೇಲೆ ಉಗ್ರರ ದಾಳಿ: ಒತ್ತೆಯಾಳುಗಳಲ್ಲಿ ಓರ್ವ ಭಾರತೀಯ

Pinterest LinkedIn Tumblr

sidney-terror

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಕೆಫೆಯೊಂದರ ಮೇಲೆ ಉಗ್ರರು ದಾಳಿ ಮಾಡಿ ಒತ್ತಾಯಾಳಾಗಿ ಇಟ್ಟುಕೊಂಡಿರುವವರಲ್ಲಿ ಭಾರತೀಯನೂ ಇದ್ದಾನೆಂದು ತಿಳಿದುಬಂದಿದೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಕೆಫೆಯಲ್ಲಿ ಒತ್ತೆಯಾಳುಗಳಾಗಿರುವವರಲ್ಲಿ ಭಾರತೀಯ ಮಾಹಿತಿ ಸಂಸ್ಥೆಯ ವ್ಯಕ್ತಿಯೋರ್ವ ಸಿಲುಕಿರುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭಾರತೀಯ ರಾಯಭಾರಿ ಕಚೇರಿಗಳು ಈಗಾಗಲೇ ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

ಒತ್ತೆಯಾಳುಗಳಲ್ಲಿ ಎಷ್ಟು ಮಂದಿ ಭಾರತೀಯರು ಸಿಲುಕಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿಲ್ಲ. ಆದರೆ, ಆಸ್ಟ್ರೇಲಿಯಾ ವಿದೇಶಾಂಗ ಸಚಿವಾಲಯದೊಂದಿಗೆ ಭಾರತೀಯ ರಾಯಭಾರವು ನಿರಂತರವಾಗಿ ಸಂಪರ್ಕ ಹೊಂದಿದೆ. ಈವರೆಗೆ ದೊರಕಿರುವ ಮಾಹಿತಿಗಳ ಪ್ರಕಾರ ಒತ್ತೆಯಾಳುಗಳಾಗಿರುವವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ ಎಂದು ನಾಯ್ಡು ಹೇಳಿದ್ದಾರೆ.

ಒತ್ತೆಯಾಳುಗಳಲ್ಲಿ ಓರ್ವ ಭಾರತೀಯ ಇನ್‌ಫೋಸಿಸ್ ಉದ್ಯೋಗಿ
ಕೆಫೆ ಮೇಲೆ ದಾಳಿ ಮಾಡಿ ಒತ್ತೆಯಾಳಾಗಿ ಇಟ್ಟುಕೊಂಡಿರುವವರ ಪೈಕಿ ಇನ್‌ಪೋಸಿಸ್ ಉದ್ಯೋಗಿ ಇರುವುದಾಗಿ ಇನ್‌ಫೋಸಿಸ್ ಸಂಸ್ಥೆ ಹೇಳಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಇನ್‌ಫೋಸಿಸ್ ಸಂಸ್ಥೆ ಅಧಿಕಾರಿಯೊಬ್ಬರು ಒತ್ತೆಯಾಳುಗಳಲ್ಲಿ ಸಂಸ್ಥೆಗೆ ಉದ್ಯೋಗಿಯೊಬ್ಬನಿರುವುದಾಗಿ ಖಚಿತಪಡಿಸಿದ್ದಾರೆ. ಅಲ್ಲದೇ, ಸಂಸ್ಥೆಗೆ ಸೇರಿದ ಇನ್ನೆಷ್ಟು ಮಂದಿ ವಿದೇಶಕ್ಕೆ ತೆರಳಿದ್ದಾರೆ ಎಂಬ ಕುರಿತು ಸಂಸ್ಥೆ ಮಾಹಿತಿ ಕಲೆಹಾಕುತ್ತಿದ್ದು, ಪ್ರಾದೇಶಿಕ ಕಚೇರಿಗಳನ್ನು ಸಂಪರ್ಕಿಸುತ್ತಿದೆ ಎಂದು ಹೇಳಿದ್ದಾರೆ.

Write A Comment