ರಾಷ್ಟ್ರೀಯ

ಚಿನ್ನ 230, ಬೆಳ್ಳಿ 520 ರೂ. ಇಳಿಕೆ

Pinterest LinkedIn Tumblr

gold-coins

ಹೊಸದಿಲ್ಲಿ: ಆಭರಣ ಪ್ರಿಯರಿಗೆ ಸಂಕ್ರಾಂತಿ ಹಬ್ಬದಲ್ಲಿ ಕೊಂಚ ನೆಮ್ಮದಿಯ ಸುದ್ದಿ. ದೇಶೀಯ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆಯಲ್ಲಿ 230 ರೂ. ಇಳಿಕೆ ಕಂಡು, ಪ್ರತಿ 10 ಗ್ರಾಂ 27,320 ರೂ.ಗೆ ಇಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಂಡುಬಂದ ದುರ್ಬಲ ಪ್ರವೃತ್ತಿಯೇ ಇದಕ್ಕೆ ಕಾರಣ.

ಅಂತೆಯೇ, ಬೆಳ್ಳಿ ಬೆಲೆಯಲ್ಲಿ 520 ರೂ. ಇಳಿಕೆ ಕಂಡು, ಪ್ರತಿ ಕಿಲೋ 37,280 ರೂ.ಗೆ ತಗ್ಗಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಿಕರಿಂದ ಬೇಡಿಕೆ ವಿಮುಖವಾಗಿದ್ದೇ ಇದಕ್ಕೆ ಕಾರಣ.

ಅಮೆರಿಕದ ಅರ್ಥ ವ್ಯವಸ್ಥೆ ಚೇತರಿಕೆಯ ಹಾದಿಗೆ ತಿರುಗಿರುವುದರಿಂದ ಬೃಹತ್ ಹೂಡಿಕೆದಾರರು ಷೇರು ಮಾರುಕಟ್ಟೆಯ ಮೇಲೆ ಹಣ ಸುರಿಯುತ್ತಿರುವುದೇ ಬಂಗಾರ ತನ್ನ ಹೊಳಪು ಕಳೆದುಕೊಳ್ಳಲು ಕಾರಣ.

ದೇಶೀಯ ಮಾರುಕಟ್ಟೆಯಲ್ಲಿ 99.9 ಹಾಗೂ 99.5 ಶುದ್ಧತೆಯ ಬಂಗಾರ ಕ್ರಮವಾಗಿ 27,320 ರೂ. ಹಾಗೂ 27,120 ರೂ.ಗೆ ಇಳಿಕೆಯಾಗಿದೆ. 8 ಗ್ರಾಂ ತೂಕದ ಸವರನ್ ಚಿನ್ನದ ಬಿಲ್ಲೆ 23,850 ರೂ.ಗೆ ತಗ್ಗಿದೆ.

ಖರೀದಿಯ 100 ಬೆಳ್ಳಿ ನಾಣ್ಯ 61 ಸಾವಿರ ರೂ. ಹಾಗೂ ಮಾರಾಟದ 100 ಬೆಳ್ಳಿ ನಾಣ್ಯ 62 ಸಾವಿರ ರೂ.ನಲ್ಲೇ ಸ್ಥಿರವಾಗಿದೆ.

Write A Comment