ಲಕ್ನೋ: ಉತ್ತರ ಪ್ರದೇಶದ ಪ್ರಮುಖ ಮಾವು ಬೆಳೆಗಾರ ಹಾಜಿಕಲೀಮುಲ್ಲಾ ಮಾವಿನ ಹೊಸ ತಳಿಯೊಂದನ್ನು ಆವಿಷ್ಕರಿಸಿದ್ದು, ಅದಕ್ಕೆ ಮೋದಿ ಮ್ಯಾಂಗೊ (ಮೋದಿ ಮಾವು) ಎಂದು ನಾಮಕರಣ ಮಾಡಿದ್ದಾನೆ. ಬಹುಶಃ ಪ್ರಧಾನಿ ಮೋದಿ ಅವರು, ಅವರದೇ ಹೆಸರನ್ನೊಳಗೊಂಡಿರುವ ಅತ್ಯುತ್ಕೃಷ್ಟ ತಳಿಯ ಫಲರಾಜನ ಹೊಸ ಸವಿಯನ್ನು ಸವಿಯಲಿದ್ದಾರೆ ಎಂಬುದು ಕಲೀಮುಲ್ಲಾನ ಮಹದಾಸೆಯಾಗಿದೆ. ಆದರೆ, ಆ ಹಣ್ಣನ್ನು ಮೋದಿಯವರಿಗೆ ಕಳುಹಿಸಲು ನನಗೆ ಸೂಕ್ತ ಮಾಧ್ಯಮದ ನೆರವಿಲ್ಲ ಎಂದು ಮಾವು ಕೃಷಿಗಾಗಿ ಪದ್ಮಶ್ರೀ ಪಡೆದಿರುವ ಕಲೀಮುಲ್ಲಾ ಹೇಳಿದ್ದಾನೆ.
ಕಲೀಮುಲ್ಲ ತಾನು ಕಂಡುಹಿಡಿಯುವ ಹೊಸ ತಳಿಗಳಿಗೆ ಸೆಲೆಬ್ರಿಟಿಗಳ ನಾಮಕರಣ ಮಾಡುತ್ತೇನೆ. ನಾನೇ ಖುದ್ದಾಗಿ ಮೋದಿಯವರಿಗೆ ಈ ಹಣ್ಣನ್ನು ತಲುಪಿಸಬೇಕು. ಬಹುಶಃ ಅವರು ಈ ಹಣ್ಣಿನ ಸ್ವಾದವನ್ನು ಖಂಡಿತಾ ಮೆಚ್ಚಿಕೊಳ್ಳುತ್ತಾರೆ ಎಂಬುದು ಕಲೀಮುಲ್ಲಾ ಹೇಳಿಕೆ. ಈ ಹಣ್ಣು ಕೇವಲ ಸ್ವಾದಕ್ಕಷ್ಟೇ ಅಲ್ಲ , ನೋಡಲೂ ಸುಂದರವಾಗಿರುವ ಮಲಕವೂ ಹೆಸರಾಗಲಿದೆ. ಈ ಹಣ್ಣನ್ನು ಸವಿದ ಎಲ್ಲರೂ ಅದರ ರುಚಿ ಮತ್ತು ಆಕರ್ಷಣೆಗೆ ಮಾರು ಹೋಗಿದ್ದಾರೆ. ಹಾಗಾಗಿ ಮೋದಿಯವರೂ ಇದನ್ನು ಖಂಡಿತ ಇಷ್ಟ ಪಡುತ್ತಾರೆ ಎಂದು ಹಾಜಿ ಕಲಿಮುಲ್ಲಾ ಹೇಳಿದ್ದಾನೆ.