ರಾಷ್ಟ್ರೀಯ

ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ತೊಳೆಸುತ್ತಿದ್ದ 8 ಶಿಕ್ಷಕರ ಬಂಧನ

Pinterest LinkedIn Tumblr

studentcleanstoilet

ತಿರುನಲ್ವೇಲಿ: ದಲಿತ ಮಕ್ಕಳಿಂದ ಮಲ ತೊಳೆಸುತ್ತಿದ್ದ 8 ಮಂದಿ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ತಿರುನಲ್ವೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿರುವ ಅನುದಾನಿತ ಪ್ರೌಢಶಾಲೆಯ ಶಿಕ್ಷಕರು ಪ್ರತಿ ತಿಂಗಳು ದಲಿತ ವಿದ್ಯಾರ್ಥಿಗಳಿಂದ ಮಲ ಸ್ವಚ್ಛ ಮಾಡಿಸುತ್ತಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಈ ಪರಿಪಾಠ ಹೆಚ್ಚಾದ ಹಿನ್ನಲೆಯಲ್ಲಿ ಆಗಾಗ ದೂರುಗಳು ಬರುತ್ತಿದ್ದವು. ಆ ಊರಿನ ದಲಿತರು ಕೆಲವು ಬಾರಿ ಪ್ರತಿಭಟನೆ ನಡೆಸಿದ್ದರೂ, ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ತೊಳೆಸುವುದನ್ನು ಶಿಕ್ಷಕರು ನಿಲ್ಲಿಸರಿಲಿಲ್ಲ.

ಬಲವಂತವಾಗಿ ಶಿಕ್ಷಕರು ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ವಿಷಯ ಗಂಭೀರ ರೂಪ ಪಡೆದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಎಂಟು ಜನ ಶಿಕ್ಷಕರನ್ನು ಬಂಧಿಸಿದ್ದಾರೆ.
ಪೋಷಕರು ಹೇಳುವ ಪ್ರಕಾರ, 6 ರಿಂದ 8ನೇ ತರಗತಿಯಲ್ಲಿರುವ ಅವರ ಮಕ್ಕಳಿಂದ ಮಲ ಸ್ವಚ್ಛ ಮಾಡಿಸಲಾಗುತ್ತದೆ. ಕೆಲಸ ಮಾಡದಿದ್ದರೆ ಶಿಕ್ಷಕರು ಕಠಿಣ ಶಿಕ್ಷೆ ಕೊಡುತ್ತಾರೆ. ಇದರಿಂದಾಗಿ ಕೆಲ ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರಂತೆ. ಪೊಲೀಸರು ಶಿಕ್ಷಕರನ್ನು ಬಂಧಿಸಿದ್ದಾರೆ. ನಮಗೆ ನ್ಯಾಯ ಸಿಗಬೇಕು ಎಂದು ದಲಿತ ಪೋಷಕರು ಆಗ್ರಹಿಸಿದ್ದಾರೆ.

Write A Comment