ರಾಷ್ಟ್ರೀಯ

ಪತಂಜಲಿ ಯೋಗಪೀಠದ ದಿವ್ಯ ಪುತ್ರ ಜೀವಕ್ ಬೀಜ್ ಔಷಧಿ ಮಾರಾಟಕ್ಕೆ ಮಧ್ಯಪ್ರದೇಶ ಸರಕಾರ ನಿಷೇಧ

Pinterest LinkedIn Tumblr

ram

ಭೋಪಾಲ್: ಯೋಗಾ ಗುರು ಬಾಬಾ ರಾಮದೇವ್ ಸಂಸ್ಥೆಯ ಪುತ್ರ ಸಂತಾನ ಭಾಗ್ಯ ಕರುಣಿಸುವ ದಿವ್ಯ ಪುತ್ರ ಜೀವಕ್ ಬೀಜ್ ಎನ್ನುವ ವಿವಾದಾತ್ಮಕ ಔಷಧಿ ಮಾರಾಟಕ್ಕೆ ನಿಷೇಧ ಹೇರಿ ಮಧ್ಯಪ್ರದೇಶ ಸರಕಾರ ಆದೇಶ ಹೊರಡಿಸಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರಕಾರ, ಮೊದ್ಲು ಔಷದಿಯ ಹೆಸರನ್ನು ಬದಲಿಸಿ ನಂತರ ರಾಜ್ಯದಲ್ಲಿ ಔಷಧಿಗಳ ಮಾರಾಟಕ್ಕೆ ಅನುಮತಿ ನೀಡಲಾಗುವುದು ಎಂದು ಪತಂಜಲಿ ಯೋಗಾಪೀಠದ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕರು ಪತಂಜಲಿ ಯೋಗಪೀಠದ ಔಷಧಿಗೆ ನಿಷೇಧ ಹೇರುವಂತೆ ಕೋರಿ ಕೋಲಾಹಲ ಸೃಷ್ಟಿಸಿದ್ದರು.

ಎಲ್ಲಾ ಕಡೆಗಳಿಂದ ಭಾರಿ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪತಂಜಲಿ ಯೋಗಪೀಠದ ಅಧಿಕಾರಿಗಳು ಸ್ಪಷ್ಟನೆ ನೀಡಿ, ಔಷಧಿ ಕೇವಲ ಮಹಿಳೆಯರಿಗಾಗಿ ಮಾತ್ರವೇ ಹೊರತು ಮಗು ಗಂಡೋ, ಹೆಣ್ಣೋ ಎನ್ನುವ ಬಗ್ಗೆ ನಿರ್ಧರಿಸಲು ಅಲ್ಲ ಎಂದು ಹೇಳಿಕೆ ನೀಡಿದೆ.

ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮದೇವ್, ಔಷಧಿಯನ್ನು ವಿರೋಧಿಸುತ್ತಿರುವವರಿಗೆ ಆಯುರ್ವೇದದ ಬಗ್ಗೆ ಜ್ಞಾನವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಪುತ್ರಜೀವಕ್ ಬೀಜ್ ಔಷಧಿ ಸೇವನೆಯಿಂದ ಗಂಡು ಮಗು ಜನಿಸುತ್ತದೆ ಎನ್ನುವ ಭರವಸೆ ನೀಡಿಲ್ಲ. ಆಯುರ್ವೇದದ ವೈಜ್ಞಾನಿಕ ಹೆಸರಾದ ಪುತ್ರನ್‌ಜಿವಾ ರೊಕ್ಸ್‌ಬುರ್ಘಿ ವಾಲ್ ಎನ್ನುವ ಹೆಸರನಿಂದ ಪುತ್ರ ಜೀವಕ್ ಬೀಜ್ ಎಂದು ಔಷದಿಗೆ ಹೆಸರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪುತ್ರಜೀವಕ್ ಬೀಜ್ ಔಷಧಿ ಸೇವನೆಯಿಂದ ಸಂತಾನ ಭಾಗ್ಯವಿಲ್ಲದ ದಂಪತಿಗಳಿಗೆ ಸಂತಾನ ಪಡೆಯಲು ಔಷಧಿ ನೆರವಾಗುತ್ತದೆಯೇ ಹೊರತು ಮಗು ಗಂಡೋ, ಹೆಣ್ಣೋ ಎನ್ನುವ ಬಗ್ಗೆ ನಿರ್ಧರಿಸಲು ಅಲ್ಲ. ಔಷಧಿಯ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಬಾಬಾ ರಾಮದೇವ್ ಮಧ್ಯಪ್ರದೇಶ ಸಿಎಂ ಚೌಹಾನ್‌ಗೆ ತಿರುಗೇಟು ನೀಡಿದ್ದಾರೆ.

Write A Comment