ಥಾಣೆ, ಮೇ 8: ತನ್ನ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಥಾಣೆ ಜಿಲ್ಲೆಯ ಭಿವಂಡಿ ಕೋರ್ಟಿಗೆ ಹಾಜರಾಗಿದ್ದಾರೆ.
ನ್ಯಾ.ಡಿ.ಪಿ.ಕಾಳೆಯವರ ಎದುರು ಹಾಜರಾದ ರಾಹುಲ್ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ಮಾ.30ರಂದು ತನ್ನ ವಕೀಲರು ನ್ಯಾಯಾಲಯಕ್ಕೆ ವ್ಯಕ್ತಪಡಿಸಿದ್ದ ಬದ್ಧತೆಯನ್ನು ಗೌರವಿಸಲು ತಾನು ಆಗಮಿಸಿದ್ದಾಗಿ ತಿಳಿಸಿದರು.
ಆರೆಸ್ಸೆಸ್ ಪದಾಧಿಕಾರಿ ರಾಜೇಶ ಕುಂಟೆ ಭಿವಂಡಿಯ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ವಿರುದ್ಧದ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ತಡೆಯಾಜ್ಞೆಯನ್ನು ನೀಡಿದೆ.
ಕಳೆದ ವರ್ಷದ ಮಾ.6ರಂದು ಜಿಲ್ಲೆಯ ಸೋನಾಲೆಯಲ್ಲಿ ಚುನಾವಣಾ ಸಭೆಯೊಂದರಲಿ್ಲ ಮಾತನಾಡಿದ್ದ ರಾಹುಲ್, ಆರೆಸ್ಸೆಸ್ಕಾರ್ಯಕರ್ತನೋರ್ವ ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದಿದ್ದನೆಂದು ಹೇಳಿದ್ದರು ಎಂದು ಕುಂಟೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.