ರಾಷ್ಟ್ರೀಯ

‘ಸತ್ಯಂ’ ರಾಮಲಿಂಗಾ ರಾಜುಗೂ ಸಿಕ್ತು ಬೇಲು!

Pinterest LinkedIn Tumblr

4119Ramalinga Raju_0_0_0_0ಬಹುಕೋಟಿ ಹಗರಣದಲ್ಲಿ ಜೈಲು ಕಂಬಿ ಎಣಿಸುತ್ತಿದ್ದ  ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗಾ ರಾಜು ಅವರಿಗೆ ಹೈದರಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯ ಶಿಕ್ಷೆಯನ್ನೂ ರದ್ದು ಮಾಡಿ ಜಾಮೀನು ನೀಡಿದೆ.

ಈ ಹಿಂದೆ ಭಾರಿ ಅವ್ಯವಹಾರ ಕುರಿತಂತೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ 7 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಹಾಗಾಗಿ ಜೈಲು ಹಕ್ಕಿಯಾಗಿದ್ದ ರಾಮಲಿಂಗಾ ರಾಜು ಹಾಗೂ 9 ಮಂದಿ ಆದೇಶವನ್ನು ಅಮಾನತು ಮಾಡುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಹೈದರಾಬಾದ್ ಮೆಟ್ರೋಪಾಲಿಟನ್ ಕೋರ್ಟ್ ನ್ಯಾಯಾಧೀಶರು ಶುಕ್ರವಾರ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದರು.

ಸೋಮವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ ರಾಮಲಿಂಗಾ ರಾಜು ಹಾಗೂ ರಾಮ ರಾಜು ತಲಾ ಒಂದು ಲಕ್ಷ ರೂಪಾಯಿ ಶ್ಯೂರಿಟಿ, ಇನ್ನುಳಿದ 8 ಮಂದಿ ತಲಾ 50 ಸಾವಿರ ರೂಪಾಯಿ ಶ್ಯೂರಿಟಿ ವಿಧಿಸಿ ಕೋರ್ಟ್ ಜಾಮೀನು ನೀಡಿದ್ದು ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನೂ ಸಹ ರದ್ದು ಮಾಡಿ ಆದೇಶ ನೀಡಿದೆ.

Write A Comment