ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ಖುಲಾಸೆಗೊಳಿಸುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಹಲವು ಬಗೆಯ ಅಭಿಪ್ರಾಯಗಳು ಕೇಳಿ ಬರುತ್ತಿದ್ದು ನಟಿ ಖುಷ್ಬೂ ಅವರು ಜಯಲಲಿತಾ ಅವರಿಗೆ ಪ್ರಶ್ನೆಯೊಂದನ್ನು ಎದುರಿಗಿಟ್ಟಿದ್ದಾರೆ.
18 ವರ್ಷಗಳ ಕಾಲ ನಡೆದ ಪ್ರಕರಣದಲ್ಲಿ ಜಯಲಲಿತಾ ನಿರ್ದೋಷಿ ಎಂದು ತೀರ್ಪು ಬಂದಿರುವ ಬಗೆಗೆ ಬೇಸರ ವ್ಯಕ್ತಪಡಿಸಿರುವ ಖುಷ್ಬೂ ‘ಖುಲಾಸೆ ಎಂಬ ಒಂದು ಪದ ನಿನ್ನ ತಪ್ಪನ್ನು ಮರೆಮಾಚುವುದಿಲ್ಲ. 18 ವರ್ಷಗಳ ಕಾಲ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಆಟವಾಡುತ್ತಾ ಬಂದೆ, ಇದೀಗ ನಿರ್ದೋಷಿಯೆಂದು ಹೊರಬಂದಿದ್ದೀಯ. ಆದರೆ, ನಿನ್ನ ತಪ್ಪನ್ನು ಮರೆತು ನೀನು ನೆಮ್ಮದಿಯಾಗಿ ನಿದ್ರಿಸಬಲ್ಲೆಯಾ..?’ ಎಂದು ಖುಷ್ಬೂ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಸೋಮವಾರವಷ್ಟೇ ಡಿಎಂಕೆ ಪಕ್ಷದ ಮುಖ್ಯಸ್ಥ ಕರುಣಾನಿಧಿ ಅವರು ಎಲ್ಲ ನ್ಯಾಯಾಲಯಗಳಿಗಿಂತ ದೊಡ್ಡ ನ್ಯಾಯಾಲಯ ಆತ್ಮಸಾಕ್ಷಿ ಎಂಬ ಮಹಾತ್ಮ ಗಾಂಧಿ ಅವರ ಉಕ್ತಿಯನ್ನು ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಿಸಬಯಸುತ್ತೇನೆ ಎಂದ ಕರುಣಾನಿಧಿ ಆತ್ಮಸಾಕ್ಷಿಗೆ ವಿರುದ್ದವಾಗಿ ನಡೆದರೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಹೇಳಿಕೆ ನೀಡುವ ಮೂಲಕ ಅಸಮಧಾನ ವ್ಯಕ್ತ ಪಡಿಸಿದ್ದರು.ಇದೀಗ ನಟಿ ಖುಷ್ಬೂ ಸಹ ಈ ರೀತಿ ತಮ್ಮ ಟ್ವಿಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
1 Comment
The Judiciary in our country has become puppet in the hands of those with Money, Muscle Power,Mafia……!!!!! What is the fate of those People without THESE………….?