ರಾಷ್ಟ್ರೀಯ

ಕೇಂದ್ರ ಸಚಿವರನ್ನೇ ತಡೆದು ನಿಲ್ಲಿಸಿದ ಮಹಿಳಾ ಅಧಿಕಾರಿ..!

Pinterest LinkedIn Tumblr

3550ram-kripal-yadav_650x400_71432020295ಪಾಟ್ನಾ: ಕೇಂದ್ರ ಸಚಿವರೊಬ್ಬರು ವಿಮಾನ ನಿಲ್ದಾಣದಲ್ಲಿ ನಿಯಮ ಪಾಲಿಸದ ವೇಳೆ ಅವರನ್ನು ತಡೆದು ನಿಲ್ಲಿಸಿದ ದಿಟ್ಟ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವಾಗ್ವಾದ ನಡೆಸಿದರೂ ಅದಕ್ಕೆ ಮಣಿಯದೇ ವಾಪಾಸ್ ಕಳುಹಿಸಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮತ್ತೊಬ್ಬ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಸ್ವಾಗತಿಸಲು ಬಂದಿದ್ದ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ವಿಮಾನ ನಿಲ್ದಾಣದಿಂದ ಹೊರ ಬರಲು ಇದ್ದ ದ್ವಾರದ ಮೂಲಕ ಒಳಗೆ ಹೋಗಲು ಯತ್ನಿಸಿದರು. ಈ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿ ಅವರನ್ನು ತಡೆದು ನಿಲ್ಲಿಸಿದ್ದಾರೆ.

ಆಗ ಸಚಿವರು ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಇದಕ್ಕೆ ಮಣಿಯದ ಮಹಿಳಾ ಅಧಿಕಾರಿ ಬೇರೊಂದು ದ್ವಾರದಿಂದ ಒಳ ಹೋಗುವಂತೆ ಸೂಚಿಸಿದರು. ಈ ವೇಳೆ ವಾಕಿಟಾಕಿ ಮೂಲಕ ಹಿರಿಯ ಅಧಿಕಾರಿಗಳೊಂದಿಗೂ ಮಾತನಾಡಿದ್ದು, ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕಡೆಗೆ ಸಚಿವರು ಒಳ ಹೋಗುವ ದ್ವಾರದ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸಿದರು. ಘಟನೆ ಕುರಿತು ಪ್ರತಿಕ್ರಿಯಿಸಿದ ಮಹಿಳಾ ಪೊಲೀಸ್ ಅಧಿಕಾರಿ ಒಂದು ವೇಳೆ ನಿಯಮ ಮೀರಿ ಸಚಿವರನ್ನು ತಾವು ಬಿಟ್ಟಿದ್ದರೆ ಸಸ್ಪೆಂಡ್ ಆಗುತ್ತಿದ್ದುದ್ದಾಗಿ ಹೇಳಿದ್ದಾರೆ.

ಸಚಿವ ರಾಮ್ ಕೃಪಾಲ್ ಯಾದವ್ ಘಟನೆಯ ಕುರಿತು ಪ್ರತಿಕ್ರಿಯಿಸಿ, ತಾವು ಹೊರ ಹೋಗಲು ಇದ್ದ ದ್ವಾರದ ಮೂಲಕ ಒಳ ಪ್ರವೇಶಿಸಲು ಯತ್ನಿಸಬಾರದಾಗಿತ್ತು. ಆದರೆ ತುಂಬಾ ಗಡಿಬಿಡಿಯಲ್ಲಿದ್ದ ಕಾರಣ ಈ ಪ್ರಮಾದವಾಗಿದೆ ಎಂಬ ಸಮಜಾಯಿಷಿ ನೀಡಿದ್ದಾರೆ.

Write A Comment