ದೆಹಲಿಯಲ್ಲಿ ಸರ್ಕಾರ ರಚಿಸಿದ ನೂರು ದಿನಗಳ ಸಂಭ್ರಮದಲ್ಲಿರುವ ಆಮ್ ಆದ್ಮಿ ಪಕ್ಷ ತನ್ನ ಪಕ್ಷದ ಚಿಹ್ನೆಯನ್ನು ಬದಲಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ಈ ಹಿಂದೆ ಕೇಸರಿ ಮತ್ತು ಹಸಿರು ಬಣ್ಣದಲ್ಲಿದ್ದ ಲೋಗೋವನ್ನು ಈಗ ನೀಲಿ ಬಣ್ಣಕ್ಕೆ ಬದಲಿಸಲಾಗಿದ್ದು ಎಎಪಿಯ ಫೇಸ್ ಬುಕ್ ಮತ್ತು ಟ್ವಿಟರ್ ಅಕೌಂಟ್ ಗಳಲ್ಲಿ ಇದೀಗ ಹೊಸ ಲೋಗೋವನ್ನು ಹಾಕಲಾಗಿದ್ದಾರೆ ವೈಬ್ ಸೈಟ್ ನಲ್ಲಿ ಮಾತ್ರ ಹಳೆಯ ಚಿಹ್ನೆಯೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷವೆಂದರೆ ಕೆಲ ದಿನಗಳ ಹಿಂದೆಯಷ್ಟೇ ಆಪ್ ವಿರುದ್ಧ ಅಸಮಾಧಾನಗೊಂಡಿದ್ದ ಅದರ ಸ್ವಯಂಸೇವಕರೊಬ್ಬರು, ತಾವು ರಚಿಸಿದ್ದ ಈ ಲೋಗೋವನ್ನು ಬಳಸದಂತೆ ಸೂಚನೆ ನೀದಿದ್ದರಲ್ಲದೇ ಈ ಲೋಗೋದ ಕಾಪಿರೈಟ್ ಹೊಂದಿರುವುದಾಗಿ ಹೇಳಿಕೊಂಡಿದ್ದರು ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಚಿಹ್ನೆ ಬದಲಾಯಿಸಿದೆ ಎನ್ನಲಾಗಿದ್ದು ಒಟ್ಟಿನಲ್ಲಿ ಅಧಿಕಾರಕ್ಕೆ ಬಂದ ನಂತರ ಪಕ್ಷದ ಚಿಹ್ನೆ ಬದಲಾವಣೆ ಮಾಡಿರುವುದು ಕೇಜ್ರಿವಾಲ್ ಅವರ ಹಿನ್ನಡೆಗೆ ಸಾಕ್ಷಿ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.