ರಾಷ್ಟ್ರೀಯ

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಮಹಿಳೆಯನ್ನು ರಕ್ಷಿಸಿ 20 ದಿನಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರ!

Pinterest LinkedIn Tumblr

RAPE

ಫರಿದಾಬಾದ್: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಯೋರ್ವ ನಂತರ ಮಹಿಳೆಗೆ ಕೆಲಸ ಕೊಡಿಸುವ ನೆಪಹೂಡಿ, ಬೆದರಿಸಿ 20 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಘಜಿಯಾಬಾದ್ ನಲ್ಲಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ಮಹಿಳೆ (25) ವಿವಾಹಿತೆಯಾಗಿದ್ದು, ಮಾರ್ಚ್ 17 ರಂದು ತನ್ನ ತಾಯಿ ಬೈದಳೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಈ ವೇಳೆ ಅಪರಿಚತ ವ್ಯಕ್ತಿ ಸಂದೀಪ್ ಎಂಬಾತ ಮಹಿಳೆಯನ್ನು ಸಮಾಧಾನ ಪಡಿಸಿ ಆತ್ಮಹತ್ಯೆ ಪ್ರಯತ್ನದಿಂದ ಹೊರ ತಂದಿದ್ದಾನೆ. ನಂತರ ಕೆಲಸ ಕೊಡುವ ಪ್ರಮಾಣ ಮಾಡಿ ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದು ಮಹಿಳೆಗೆ ಬೆದರಿಸಿ ಅತ್ಯಾಚಾರ ನಡೆಸಿದ್ದಾನೆ.

ಇದಾದ ಮೂರು ದಿನಗಳ ಬಳಿಕೆ ಮಹಿಳೆಯನ್ನು ಘಸಿಯಾಬಾದ್ ಗೆ ಕರೆದೊಯ್ದು ಆರೋಪಿ ಖಾಲಿ ಪತ್ರಕ್ಕೆ ಸಹಿ ಮಾಡುವಂತೆ ತಿಳಿಸಿ ವಿವಾಹವಾಗುವಂತೆ ಹಿಂಸೆ ನೀಡಿದ್ದಾನೆ. ಆದರೆ, ಮಹಿಳೆ ಈ ವೇಳೆ ತನಗೆ ವಿವಾಹವಾಗಿರುವುದನ್ನು ಹೇಳಿಕೊಂಡಿದ್ದಾಳೆ. ಇದನ್ನು ತಿಳಿದ ಸಂದೀಪ್ ಮತ್ತೆ 20 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾನೆ. ನಂತರ ತನ್ನ ಸಹಚರರೊಂದಿಗೆ ಸೇರಿಕೊಂಡು ಆರೋಪಿ ಸಂದೀಪ್ ಮಹಿಳೆಯನ್ನು ಬಾಡಿಗೆ ವ್ಯಾಪಾರ ಮಾಡಲು ಪ್ರಯತ್ನ ನಡೆಸುತ್ತಿದ್ದನು ಎಂದು ಮಹಿಳೆ ದೂರು ನೀಡಿರುವ ಪತ್ರದಲ್ಲಿ ಹೇಳಿಕೊಂಡಿದ್ದಾಳೆ.

ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಸೆಕ್ಷನ್ 344, 354, 376 (2) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Write A Comment