ನವದೆಹಲಿ, ಜೂ.5: ಚಿನ್ನ ಮತ್ತು ವಿದೇಶಿ ಕರೆನ್ಸಿ ಕಳ್ಳಸಾಗಣೆ ಆರೋಪದಡಿ ಭಾರತೀಯ ವಾಯುಸಾರಿಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಏರ್ ಇಂಡಿಯಾ ಸಿಬ್ಬಂದಿ ವಿಮಾನಗಳಲ್ಲಿ ಭಾರೀ ಪ್ರಮಾಣದ ಬಂಗಾರ ಮತ್ತು ಬೇರೆ ಬೇರೆ ದೇಶಗಳ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾಹ್‌ನ್‌ನಲ್ಲಿರುವ ಕಿಂಗ್ ಅಬ್ದುಲ್‌ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೇರಳದ ಕೊಚ್ಚಿಯ ವಿಮಾನದಲ್ಲಿ ಬಂಧಿತ ಸೇರಿದಂತೆ ಒಟ್ಟು 12 ಸಿಬ್ಬಂದಿಯಿದ್ದರು. ಆ ನೌಕರನ ವಿರುದ್ಧದ ಆರೋಪ ನಿಜವೇ ಆಗಿದ್ದರೆ, ಅವನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಮಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.