ನಕಲಿ ಕಾನೂನು ಪದವಿಗೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಸಚಿವ ಜಿತೇಂದರ್ ಸಿಂಗ್ ತೊಮರ್ ತಪ್ಪೊಪ್ಪಿಕೊಂಡಿದ್ದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ದೆಹಲಿ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿಕೊಳ್ಳಲು ನಕಲಿ ಪದವಿ ಪ್ರಮಾಣ ಪತ್ರ ಕೊಟ್ಟ ಆರೋಪದ ಮೇಲೆ ಬಂಧನದಲ್ಲಿರುವ ತೊಮರ್, ದೆಹಲಿಯ ಮದನ್ ಎಂಬ ಏಜೆಂಟ್ ಒಬ್ಬನಿಂದ ಉತ್ತರ ಪ್ರದೇಶದ ಅವಧ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪ್ರಮಾಣ ಪತ್ರ ಹಾಗೂ ಮುಂಗೇರ್ನ ವಿನೋದ್ ಎಂಬಾತನಿಂದ ಬಿಹಾರದ ತಿಲ್ಕಾ ಮಾಂಜಿ ಭಗಲ್ಪುರ ವಿಶ್ವವಿದ್ಯಾಲಯದಿಂದ ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಪಡೆದಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೇ ತಮಗೆ ಪದವಿ ಪಡೆಯುವ ಆಸೆಯಿತ್ತು. ಆದರೆ ಅಧ್ಯಯನ ಮಾಡಲು ಮನಸ್ಸಿರಲಿಲ್ಲ ಈ ಕಾರಣಕ್ಕೆ ನಕಲಿ ಪದವಿ ಪಡೆಯಬೇಕಾಯಿತು ಎಂಬುದನ್ನೂ ತೋಮರ್ ವಿಚಾರಣೆ ಸಮಯದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.