ರಾಷ್ಟ್ರೀಯ

100 ಕೋಟಿ ರೂ. ಮೌಲ್ಯದ ಹಾವಿನ ವಿಷ ವಶ; ಆರು ಮಂದಿ ಆರೋಪಿಗಳ ಬಂಧನ

Pinterest LinkedIn Tumblr

snake poison

ಜಲ್ಪೈಗುರಿ: ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಭಾರಿ ಕಾರ್ಯಾಚರಣೆಯೊಂದರಲ್ಲಿ 100 ಕೋಟಿ ರೂ. ಮೌಲ್ಯದ ಹಾವಿನ ವಿಷ ಪಡಿಸಿಕೊಂಡಿದ್ದು, ಆರು ವ್ಯಕ್ತಿಗಳನ್ನು ಬಂಧಿಸಿದೆ.

ಬೇಲಕೊಬ ಎಂಬಲ್ಲಿ ಅರಣ್ಯ ಇಲಾಖೆ ಪೊಲೀಸರು ವಿಷದ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ, ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೈಕುಂತಾಪುರ ಅರಣ್ಯ ವಿಭಾಗದ ರೇಂಜರ್‌ ಸಂಜಯ್ ದತ್ತ ತಿಳಿಸಿದ್ದಾರೆ.

ಮೂರು ಬೈಕ್‌ಗಳಲ್ಲಿ ಸಾಗುತ್ತಿದ್ದ ವ್ಯಕ್ತಿಗಳಿಂದ ವಿಷವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬೃಹತ್‌ ಪ್ರಮಾಣದ ವಿಷವನ್ನು ಪ್ರಾಯಶಃ ಭೂತಾನ್ ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಆರೋಪಿಗಳು ಶಾಲೆಯ ಬ್ಯಾಗ್‌ ಒಳಗೆ ಡಬ್ಬಗಳಲ್ಲಿ ಹಾವಿನ ವಿಷವನ್ನು ಸಂಗ್ರಹಿಸಿಟ್ಟಿದ್ದರು. ಅದನ್ನು ಬೈಕ್‌ ಮೇಲೆ ಸಾಗಿಸುತ್ತಿದ್ದರು ಎಂದ ದತ್ತ, ಈ ವಿಷವನ್ನು ವಿಜ್ಞಾನಿಗಳು ವಿಷ ವಿರೋಧಿ ಔಷಧವನ್ನು ಅಭಿವೃದ್ಧಿ ಪಡಿಸಲು ಬಳಸುತ್ತಾರೆ ಎಂದು ತಿಳಿಸಿದರು.

Write A Comment