ರಾಷ್ಟ್ರೀಯ

ಪ್ರೇಮಿ ಸತ್ತದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ

Pinterest LinkedIn Tumblr

pooja

ಅಹ್ಮದಾಬಾದ್: ವಿವಾಹವಾಗಿ ಮಗುವೂ ಇದ್ದ 29 ವರ್ಷದ ಮಹಿಳೆಯೊಬ್ಬಳು ತನ್ನ ಪ್ರೇಮಿ ಸಾವನ್ನಪ್ಪಿದ ಕಾರಣಕ್ಕಾಗಿ ಆತನ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂಲತಃ ರಾಜಸ್ಥಾನದ ಬಿಕನೀರ್ ನವಳಾದ ಪೂಜಾ ಚೌಧರಿ ಎಂಬಾಕೆಯೇ ತನ್ನ ಪ್ರೇಮಿ ರೋನಕ್ ಎಂಬಾತನ ಅಹ್ಮದಾಬಾದಿನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆಯಾಗಿದ್ದಾಳೆ. ಈ ಮೊದಲೇ ಒಂದು ಮದುವೆಯಾಗಿದ್ದ ಪೂಜಾಳಿಗೆ ಒಬ್ಬ ಮಗನೂ ಇದ್ದು, ಮೊದಲ ಪತಿಯಿಂದ ವಿಚ್ಚೇದನ ಪಡೆದ ಬಳಿಕ ಅಹ್ಮದಾಬಾದಿನ ಹಿರೇನ್ ಪುರೋಹಿತ್ ಎಂಬಾತನೊಂದಿಗೆ ಮತ್ತೊಮ್ಮೆ ವಿವಾಹ ಮಾಡಿಕೊಂಡಿದ್ದಳೆನ್ನಲಾಗಿದೆ.

ಈ ಮಧ್ಯೆ ರೋನಕ್ ಎಂಬಾತನ ಗೆಳೆತನ ಬೆಳೆಸಿಕೊಂಡ ಪೂಜಾ ಚೌಧರಿ, ಕಳೆದ ಒಂದು ತಿಂಗಳಿನಿಂದ ಆತನ ಮನೆಯಲ್ಲಿಯೇ ವಾಸ ಮಾಡುತ್ತಿದ್ದು, ಎರಡನೇ ಪತಿಯಿಂದ ವಿಚ್ಚೇದನ ಪಡೆದು ರೋನಕ್ ಜೊತೆ ವಿವಾಹವಾಗಲು ಮುಂದಾಗಿದ್ದಳೆನ್ನಲಾಗಿದೆ. ಜೂನ್ 23 ರಂದು ಹೃದಯಾಘಾತಕ್ಕೊಳಗಾಗಿ ರೋನಕ್ ಸಾವನ್ನಪ್ಪಿದ್ದು, ಇದರಿಂದಾಗಿ ಪೂಜಾ ಆಘಾತಕ್ಕೊಳಗಾಗಿದ್ದಳೆಂದು ಹೇಳಲಾಗಿದೆ.

ರೋನಕ್ ಅಂತ್ಯ ಸಂಸ್ಕಾರ ನೆರವೇರಿಸಿದ್ದ ಕುಟುಂಬಸ್ಥರು ನರ್ಮದಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲು ತೆರಳಿದ್ದು, ಮನೆಯಲ್ಲಿ ಒಬ್ಬಳೇ ಇದ್ದ ಪೂಜಾ ಜೂನ್ 25 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೂಜಾಳ ಶವವನ್ನು ಸ್ವೀಕರಿಸಲು ರಾಜಸ್ಥಾನದ ಬಿಕನೀರ್ ನಲ್ಲಿರುವ ಆಕೆಯ ತಾಯಿ ನಿರಾಕರಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಆಕೆಯ ಶವವನ್ನು ಎರಡನೇ ಪತಿ ಹಿರೇನ್ ಪುರೋಹಿತ್ ಗೆ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ.

Write A Comment