ಗಲ್ಫ್

ಸೌದಿ ಅರೇಬಿಯ: ರಸ್ತೆ ದುರಂತಕ್ಕೆ ಐವರು ಕೇರಳಿಗರು ಬಲಿ

Pinterest LinkedIn Tumblr

accident_image

ರಿಯಾದ್, ಜು.4: ಸೌದಿ ಅರೇಬಿಯದ ಪೂರ್ವ ಪ್ರಾಂತದಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕೇರಳ ಮೂಲದ ಐವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಇಂತಹದೇ ಘಟನೆಯೊಂದರಲ್ಲಿ ಕೆಲವು ದಿನಗಳ ಹಿಂದೆ ಮಕ್ಕಾದಿಂದ ಹಿಂದಿರುಗುತ್ತಿದ್ದ ನಾಲ್ವರು ಸದಸ್ಯರ ಭಾರತೀಯ ಕುಟುಂಬವೊಂದು ಸಾವಿಗೀಡಾಗಿತ್ತು. ರಿಯಾದ್‌ನಿಂದ ಸುಮಾರು 381 ಕಿ.ಮೀ. ದೂರದ ದಮ್ಮಾಮ್ ಸಮೀಪ ಗುರುವಾರ ಕೇರಳ ಮೂಲದ ಐವರು ಕಾರ್ಮಿಕರು ಸಂಚರಿಸುತ್ತಿದ್ದ ವಾಹನಕ್ಕೆ ಅತಿವೇಗದಿಂದ ಬಂದ ಟ್ರೈಲರ್ ಅಪ್ಪಳಿಸಿದ ವೇಳೆ ಪ್ರಸಕ್ತ ದುರಂತ ಸಂಭವಿಸಿದೆ.

ಮೃತಪಟ್ಟವರನ್ನು ಸಂತೋಷ್ ಕುಮಾರ್, ಇಕ್ಬಾಲ್ ನೊಮನ್, ತುಳಸಿ ಕೃಷ್ಣನ್, ರವೀಂದ್ರ ನಾಯರ್ ಹಾಗೂ ಭಗವತಿ ಪಿಳ್ಳೈ ಎಂದು ಗುರುತಿಸಲಾಗಿದೆ ಎಂದು ಭಾರತೀಯ ದೂತಾವಾಸದ ಅಧಿಕಾರಿ ಮನೋಜ್ ಕುಮಾರ್‌ರನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿದೆ. ದೂತಾವಾಸವು ಸಂಬಂಧಪಟ್ಟ ಕಂಪೆನಿಯ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಭಾರತಕ್ಕೆ ಮರಳಿಸುವಲ್ಲಿ ನೆರವಾಗುತ್ತಿರುವುದಾಗಿ ಮನೋಜ್ ಕುಮಾರ್ ತಿಳಿಸಿದ್ದಾರೆ.

Write A Comment