ರಾಷ್ಟ್ರೀಯ

ಗ್ರಾಮೀಣ ಭಾರತದಲ್ಲಿ 74 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳು..!

Pinterest LinkedIn Tumblr

3rd-gender-in-indiaಕೋಲ್ಕತ್ತಾ, ಜು.5- ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 74 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಮಂಗಳ ಮುಖಿಯರಿದ್ದು, ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು, ಅಂದರೆ 13 ಸಾವಿರ ಮಂದಿಯಿದ್ದಾರೆ. ಎರಡನೆ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 10 ಸಾವಿರ ಜನರಿದ್ದಾರೆ.

ಕೇಂದ್ರ ಸರ್ಕಾರ 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ಆಧರಿಸಿ ಬಿಡುಗಡೆ ಮಾಡಿರುವ ಸಮೀಕ್ಷೆ ವರದಿಯಿಂದ ಇದು ಬಹಿರಂಗವಾಗಿದೆ. ಲಿಂಗಾನುಪಾತ ಗಣತಿ ವರದಿಯಲ್ಲಿ ಗ್ರಾಮೀಣ ಭಾರತವು 74,286 ಮಂದಿ ಮಂಗಳ ಮುಖಿಯರು ಪ್ರಸ್ತುತ ವಾಸವಾಗಿದ್ದಾರೆ ಎಂದು ಹೇಳಲಾಗಿದೆ. ದೇಶದ ಒಟ್ಟು 35 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಉತ್ತರ ಪ್ರದೇಶದಲ್ಲಿ 12,916 ಜನ ಮಂಗಳಮುಖಿಯರು, ಬಿಹಾರದಲ್ಲಿ 9,987 ಹಾಗೂ ಪಶ್ಚಿಮ ಬಂಗಾಳದಲ್ಲಿ 9,868 ಮಂದಿಯಿದ್ದಾರೆ.

ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿರುವ ಈ ಸಾಮಾಜಿಕ-ಆರ್ಥಿಕ ಹಾಗೂ ಜಾತಿಗಣತಿಯಲ್ಲಿ ನೀಡಲಾಗಿರುವ ಚಿತ್ರಣದಿಂದ ಭಾರತದಲ್ಲಿ ತೃತೀಯ ಲಿಂಗಿಗಳ ಸಂಖ್ಯೆ ಏರುತ್ತಿರುವುದು ಸ್ಪಷ್ಟವಾಗಿದೆ ಎಂದು ಮಂಗಳ ಮುಖಿಯರ ಸಂಘದ ಕಾರ್ಯಕರ್ತೆ ಮತ್ತು ಮಂಗಳಮುಖಿಯರ ಅಭಿವೃದ್ಧಿ ಮಂಡಳಿಯ ಸದಸ್ಯೆ ರಂಜಿತಾ ಸಿನ್ಹಾ ಹೇಳಿದ್ದಾರೆ.

Write A Comment