ಪ್ರಧಾನಿ ಗದ್ದುಗೆ ಏರಿದ ನಂತರ ವಿದೇಶಿ ಪ್ರವಾಸಗಳಿಂದ ಸುದ್ದಿಯಾಗುತ್ತಿರುವ ನರೇಂದ್ರ ಮೋದಿ ಅವರು ಮತ್ತೆ ವಿಮಾನವೇರಲು ಸಜ್ಜಾಗಿದ್ದು ಜುಲೈ 6 ರಂದು 8 ದಿನಗಳ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ವಿದೇಶಗಳೊಂದಿಗೆ ಉತ್ತಮ ಭಾಂದವ್ಯ ಸ್ಥಾಪಿಸಿ ಸ್ನೇಹಯುತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮಧ್ಯ ಏಷ್ಯಾದ ರಾಷ್ಟ್ರಗಳಾದ ಉಜ್ಬೇಕಿಸ್ತಾನ, ಕಜಕಿಸ್ತಾನ, ತುರ್ಕ್ವೆುೕನಿಸ್ತಾನ, ರ್ಕಿಗಿಸ್ತಾನ ಮತ್ತು ತಜಿಕಿಸ್ತಾನ್ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ರಷ್ಯಾದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಿ ಹಲವುಉಖನ್ದರ ಜತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ನಂತರ ರಷ್ಯಾದಲ್ಲಿ ನಡೆಯಲಿರುವ 6 ರಾಷ್ಟ್ರಗಳ ಶಾಂಘಯ್ ಕೋಆಪರೇಷನ್ ಆರ್ಗನೈಸೇಷನ್ ಸಮ್ಮೇಳನದಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರವಾದ ಉಜ್ಬೇಕಿಸ್ತಾನಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅಲ್ಲಿನ ಅಧ್ಯಕ್ಷ ಕರಿಮೋವ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ. ಅಲ್ಲದೇ ಉಜ್ಬೇಕಿಸ್ತಾನದೊಂದಿಗೆ ಆರ್ಥಿಕ ಸಂಬಂಧವನ್ನು ವೃದ್ಧಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮೋದಿ ಅವರು ತಿಳಿಸಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿವೆ.