ಗಲ್ಫ್

ಸೌದಿಯಲ್ಲೋರ್ವ ಊಮನ್ ಚಾಂಡಿ ! ಇದು ಸತ್ಯ ವಿಚಾರ; ಊಮನ್ ಚಾಂಡಿಯನ್ನು ಹೋಲುವ ಸೌದಿ ಪ್ರಜೆ ಶೀಘ್ರವೇ ಭಾರತಕ್ಕೆ ಭೇಟಿ

Pinterest LinkedIn Tumblr

umman chandi

ದುಬೈ: ತಮ್ಮನ್ನೇ ಹೋಲುವ ಸೌದಿ ಅರೇಬಿಯಾ ಪ್ರಜೆಯನ್ನು ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ ಅವರು ಭಾರತಕ್ಕೆ ಆಹ್ವಾನಿಸಿದ್ದು, ಇಬ್ಬರೂ ಶೀಘ್ರದಲ್ಲಿಯೇ ಭೇಟಿಯಾಗಲಿದ್ದಾರೆ.

ಚಾಂಡಿಯನ್ನು ಹೋಲುವ ಸೌದಿ ಪ್ರಜೆಯ ಫೋಟೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೌದಿಯ ಜಝನ್‌ನ ಹಸನ್ ಅಲ್ ಅಸಿರಿಗೆ ಸೌದಿಯಲ್ಲಿರುವ ಕೇರಳೀಯರು ಚಾಂಡಿ ಫೋಟೋ ತೋರಿಸಿದ್ದರು. ಅದರಲ್ಲಿರುವ ಹೋಲಿಕೆ ನೋಡಿ ಆಶ್ಚರ್ಯಚಕಿತರಾಗಿದ್ದರು. ಹಾಗೆಯೇ ಅಸಿರಿ ಫೋಟೋವನ್ನು ಆಪ್ತರೊಬ್ಬರು ಚಾಂಡಿಗೆ ತೋರಿಸಿದ್ದರು. ಅವರೂ ಆಶ್ಚರ್ಯ ವ್ಯಕ್ತಪಡಿಸಿದರು. ‘ಅಸಿರಿ ಭಾರತಕ್ಕೆ ಭೇಟಿ ನೀಡಿದರೆ, ಅವರನ್ನು ಭೇಟಿಯಾಗಲು ಚಾಂಡಿ ಕಾತುರರಾಗಿದ್ದಾರೆ,’ ಎಂದು ಸಿಎಂ ಆಪ್ತರು ತಿಳಿಸಿದ್ದಾರೆ.

ರಂಜಾನ್ ನಂತರ ಅಸಿರಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ. ಇತ್ತೀಚೆಗೆ ಕೆನಡಾದಲ್ಲಿಯೂ ಚಾಂಡಿಯನ್ನು ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು.

Write A Comment