ಅಂತರಾಷ್ಟ್ರೀಯ

ಕಝಕಿಸ್ತಾನದೊಂದಿಗೆ 5 ಮಹತ್ವದ ಒಪ್ಪಂದಗಳಿಗೆ ಭಾರತ ಸಹಿ

Pinterest LinkedIn Tumblr

000034B_

ಅಸ್ತಾನ, ಜು.9: ಸೇನಾ ಸಹಕಾರವನ್ನು ವೃದ್ಧಿಸುವ ರಕ್ಷಣಾ ಒಡಂಬಡಿಕೆ ಮತ್ತು ಯುರೇನಿಯಂ ಪೂರೈಕೆ ಗುತ್ತಿಗೆ ಸೇರಿದಂತೆ ಐದು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಕಝಕಿಸ್ತಾನ್‌ಗಳು ಇಂದು ಸಹಿ ಹಾಕಿವೆ.

ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕಝಕಿಸ್ತಾನ್ ಅಧ್ಯಕ್ಷ ನೂರ್‌ಸುಲ್ತಾನ್ ನಝರ್‌ಬಯೇವ್ ವ್ಯಾಪಕ ಮಾತುಕತೆಗಳನ್ನು ನಡೆಸಿದರು.

ನಝರ್‌ಬಯೇವ್ ಜೊತೆ ನೇರ ಹಾಗೂ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದ ಮೋದಿ, ಭಾರತ ಮತ್ತು ಹೈಡ್ರೊ-ಕಾರ್ಬನ್ (ಪೆಟ್ರೋಲಿಯಂ) ಸಮೃದ್ಧ ಕಝಿಕಿಸ್ತಾನ್‌ಗಳ ನಡುವೆ ಇರುವ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಒಪ್ಪಿಕೊಳ್ಳಲಾಯಿತು ಎಂದರು.

‘‘ಪ್ರಾದೇಶಿಕ ಶಾಂತಿ, ಸಂಪರ್ಕ, ವಿಶ್ವಸಂಸ್ಥೆಯ ಸುಧಾರಣೆಗಳು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ವಿಷಯಗಳ ಕುರಿತ ನಮ್ಮ ನಿಲುವುಗಳನ್ನು ನಾವು ಹಂಚಿಕೊಂಡೆವು’’ ಎಂದು ಇಲ್ಲಿ ನಝರ್‌ಬಯೇವ್ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ತಿಳಿಸಿದರು.ಉಭಯ ದೇಶಗಳ ನಡುವಿನ ವ್ಯೆಹಾತ್ಮಕ ಭಾಗೀದಾರಿಕೆಯಲ್ಲಿ ರಕ್ಷಣೆ ಮತ್ತು ಭದ್ರತಾ ಸಹಕಾರ ಮಹತ್ವದ ಆಯಾಮವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ‘‘ರಕ್ಷಣಾ ಉತ್ಪಾದನೆ ಸೇರಿದಂತೆ ರಕ್ಷಣಾ ಸಹಕಾರವನ್ನು ಬಲಗೊಳಿಸಲು ನಾವಿಬ್ಬರೂ ಬಯಸಿದ್ದೇವೆ. ರಕ್ಷಣಾ ಸಹಕಾರ ಕುರಿತ ನೂತನ ಒಡಂಬಡಿಕೆಯನ್ನು ನಾವು ಸ್ವಾಗತಿಸುತ್ತೇವೆ’’ ಎಂದರು.

ಒಡಂಬಡಿಕೆಯು ಪರಸ್ಪರರ ದೇಶಗಳಿಗೆ ನಿಯಮಿತ ಭೇಟಿಗಳು, ಸಮಾಲೋಚನೆಗಳು, ಸೇನಾ ಸಿಬ್ಬಂದಿಯ ತರಬೇತಿ, ಸೇನಾ ತಾಂತ್ರಿಕ ಸಹಕಾರ, ಜಂಟಿ ಯುದ್ಧಾಭ್ಯಾಸಗಳು, ವಿಶೇಷ ಪಡೆಗಳ ವಿನಿಮಯಗಳು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸಹಕಾರ ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಸಹಕಾರದ ವ್ಯಾಪ್ತಿಯನ್ನು ಇನ್ನಷ್ಟು ವಿಶಾಲಗೊಳಿಸುತ್ತದೆ.

ವಿದ್ಯುತ್ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಭಾರತಕ್ಕೆ ನೈಸರ್ಗಿಕ ಯುರೇನಿಯಂ ಪೂರೈಸುವ ದೀರ್ಘಾವಧಿ ಗುತ್ತಿಗೆಯೊಂದನ್ನು ನವೀಕರಿಸಿರುವುದಕ್ಕಾಗಿ ಪ್ರಧಾನಿ ಎನ್‌ಸಿ ‘‘ಕಝ್‌ಆ್ಯಟಂಪ್ರಾಮ್’’ ಜೆಎಸ್‌ಸಿ ಮತ್ತು ಎನ್‌ಪಿಸಿಐಎಲ್ ಸಂಸ್ಥೆಗಳನ್ನು ಅಭಿನಂದಿಸಿದರು. ‘‘ಯುರೇನಿಯಂ ಖರೀದಿ ಗುತ್ತಿಗೆಯ ಮೂಲಕ ನಾವು ನಾಗರಿಕ ಪರಮಾಣು ಸಹಕಾರ ಹೊಂದಿದ ಮೊದಲ ದೇಶಗಳ ಪೈಕಿ ಕಝಕಿಸ್ತಾನ್ ಕೂಡ ಒಂದು’’ ಎಂದು ಮೋದಿ ಹೇಳಿದರು.

Write A Comment