ರಾಷ್ಟ್ರೀಯ

16 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ ವ್ಯಕ್ತಿ ಕಾಮುಕ 

Pinterest LinkedIn Tumblr

Rape-on-girl_in_banbg

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ 24 ವರ್ಷದ ಯುವಕ 2009ರಿಂದೀಚೆಗೆ ಒಟ್ಟು 15 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಚಿಕ್ಕ ಮಕ್ಕಳಿಗೆ ಚಾಕಲೇಟ್ ಮತ್ತು ಹಣ ತೋರಿಸಿ ಆಮಿಷವೊಡ್ಡಿ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅತ್ಯಾಚಾರವೆಸಗಿ ಕೊಲೆ ಮಾಡುತ್ತಿದ್ದೆ. ನಂತರ ದೇಹವನ್ನು ಚರಂಡಿಗೆ ಬಿಸಾಕುತ್ತಿದ್ದೆ ಇಲ್ಲವೇ ಯಾರೂ ಕಾಣದ ಪ್ರದೇಶದಲ್ಲಿ ಸುಟ್ಟುಹಾಕುತ್ತಿದ್ದೆ ಎಂದು ಆರೋಪಿ ರವೀಂದರ್ ಕುಮಾರ್ ಶುಕ್ರವಾರ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ಇದುವರೆಗೆ ಪೊಲೀಸರು ರವೀಂದರ್ ಕುಮಾರ್ ಕೊಲೆಗೈದ ಆರು ಪ್ರಕರಣಗಳನ್ನು ಭೇದಿಸಿದ್ದಾರೆ.ಇದಕ್ಕೂ ಮುನ್ನ ಆತ ಬೆಗುಂಪುರ್ ಪ್ರದೇಶದಲ್ಲಿ ಹುಡುಗನೊಬ್ಬನನ್ನು ಅಪಹರಿಸಿ ಕೊಂದ ಪ್ರಕರಣದಲ್ಲಿ ಜೈಲಿಗೆ ಸೇರಿ ಜಾಮೀನು ಮೇಲೆ ಹೊರಬಂದಿದ್ದನು. ನಂತರ ಬಾಲಕಿಯೊಬ್ಬಳನ್ನು ಅಪಹರಿಸಿ ಜೈಲು ಪಾಲಾಗಿ ನಂತರ ಹೊರಬಂದಿದ್ದನು.

ರವೀಂದರ್ ಕುಮಾರ್ ನೊಯ್ಡಾ ಮತ್ತು ಅಲಿಘಡ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತರ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾದವನಾಗಿದ್ದ. ಈ ಬಾರಿ ಪೊಲೀಸರಿಗೆ ಸಿಕ್ಕಿಬಿದ್ದು, ವಿಚಾರಣೆ ನಡೆಸಿದಾಗ ತಾನು ಮಾಡಿದ ತಪ್ಪಿನ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಅವನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿನ ಪೊಲೀಸ್ ಉಪ ಆಯುಕ್ತ ವಿಕ್ರಮಜೀತ್ ಸಿಂಗ್ ತಿಳಿಸಿದ್ದಾರೆ.

Write A Comment