ರಾಷ್ಟ್ರೀಯ

ತಾಂತ್ರಿಕನ ಮಾತು ಕೇಳಿ 4 ಬಾಲಕಿಯರನ್ನು ಕೊಂದ ವ್ಯಕ್ತಿ !

Pinterest LinkedIn Tumblr

child-rape

ಆಗ್ರಾ: ಪತ್ನಿಯ ಮಾನಸಿಕ ರೋಗವನ್ನು ವಾಸಿಮಾಡಬಹುದು ಎಂದ ಮುಂತ್ರವಾದಿಯೊಬ್ಬನ ಮಾತು ಕೇಳಿ, ವ್ಯಕ್ತಿಯೊಬ್ಬ ನಾಲ್ವರು ಅಪ್ರಾಪ್ತೆಯರನ್ನು ಕೊಲೆ ಮಾಡಿದ್ದಲ್ಲದೇ, ಮತ್ತೆ ಮೂವರನ್ನು ಕೊಲ್ಲಲು ತಯಾರಿ ನಡೆಸಿದ್ದನಂತೆ!

ಇದೀಗ ಆರೋಪಿ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ನೀಡಿದ ಹೇಳಿಕೆಯಲ್ಲಿ ಈ ಭೀಕರ ವಿಷಯವನ್ನು ಬಹಿರಂಗಗೊಳಿಸಿದ್ದಾನೆ. ಅಷ್ಟೇ ಅಲ್ಲದೇ ಆ ಮೂವರು ಬಾಲಕಿಯನ್ನು ಕೊಲ್ಲುವ ಮುನ್ನ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾನೆ.

ಲಾಲುವಾ ಎಂಬಾತನ್ನು ಠಾಣೆಯಿಂದ ಎಳೆದು ತಂದು, 12 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾಗಿ ಆರೋಪಿಸಿ, ಸುಮಾರು 100 ಮಂದಿ ಇದ್ದ ಗುಪೊಂದು ಹೊಡೆದು ಕೊಂದಿತ್ತು. ಲಾಲುವಾ, ಸೋನು ಸ್ನೇಹತನಾಗಿದ್ದು, ಈತನ ಕುಕೃತ್ಯಕ್ಕೆ ಅವನೇ ಸಲಹೆ ನೀಡುತ್ತಿದ್ದ ಎನ್ನಲಾಗುತ್ತಿದೆ. ಆಕ್ರೋಶಗೊಂಡ ಜನರು ಸೋನು ಮೇಲೂ ಹಲ್ಲೆ ನಡೆಸಿದ್ದಾರೆ. ಮಧ್ಯೆ ಪ್ರವೇಶಿಸಿದ ಪೊಲೀಸರು ಈತನನ್ನು ರಕ್ಷಿಸಿ, ಆಗ್ರಾದ ಎಸ್.ಎನ್.ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಸೋನು ನಡೆಸಿದ ಕುಕೃತ್ಯಗಳೇನು?: ‘ಕಳೆದ ವಾರ ಪರ್ಖುಮಾ ಹಳ್ಳಿಯ ಪೊದೆಯೊಂದರಲ್ಲಿ ಸಿಕ್ಕಿದ 12 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ, ಕೊಲೆ ಮಾಡಿರುವುದಾಗಿಯೂ ಸೋನು ಒಪ್ಪಿಕೊಂಡಿದ್ದಾನೆ. 2010, ನವೆಂಬರ್ 23ರಂದು 14 ವರ್ಷದ ಬಾಲಕಿಯೊಬ್ಬಳು ಮದುವೆಯೊಂದಕ್ಕೆ ಹಳ್ಳಿಗೆ ಆಗಮಿಸಿದ್ದಳು. ಆಕೆಯನ್ನು ಅತ್ಯಾಚಾರವೆಸಗಿ, ಕೊಂದಿದ್ದಲ್ಲದೇ, ನಾಲ್ಕು ವರ್ಷದ ಹಸುಳೆಯನ್ನು 2012ರಲ್ಲಿ ಸೋನು ಹತ್ಯೆಗೈದಿದ್ದ. ದೊಡ್ಡ ಕಲ್ಲಿನಿಂದ ಚಚ್ಚಿ, ತಲೆ ನುಜ್ಜು ನೂರಾದ ಮೃತ ದೇಹ ಹಳ್ಳಿಯಲ್ಲಿ ಸಿಕ್ಕಿತ್ತು. ಒಂಬತ್ತು ವರ್ಷದ ಮತ್ತೊಂದು ಹುಡುಗಿಯನ್ನೂ ಕೊಂದಿದ್ದಾಗಿ ಸೋನು ಹೇಳುತ್ತಿದ್ದು, ದಿನಾಂಕವನ್ನು ಮರೆತಿದ್ದಾನೆ,’ ಎಂದು ಮಥುರಾದ ಫರಾ ಠಾಣೆಯ ಎಸ್ಐ ಓಂಕಾರ್ ಶರ್ಮಾ ಹೇಳಿದ್ದಾರೆ.

‘ಸ್ಥಳೀಯ ಠಾಣೆಯಲ್ಲಿ ಈ ಎಲ್ಲ ಪ್ರಕರಣಗಳು ದಾಖಲಾಗಿವೆ. ಇಷ್ಟೇ ಅಲ್ಲದೇ ಸೋನು ಮತ್ತು ಲಾಲುವಾ ಮತ್ತಷ್ಟು ಕೊಲೆ ಮಾಡಿದ್ದಾರೆಂದು ಹಳ್ಳಿಗರು ಆರೋಪಿಸಿಸುತ್ತಿದ್ದಾರೆ,’ ಎಂದು ಮಥುರಾ ಎಸ್‌ಎಸ್‌ಪಿ ರಾಕೇಶ್ ಸಿಂಗ್ ಹೇಳಿದ್ದಾರೆ.

‘ನಾನು ಯಾರನ್ನೂ ಅತ್ಯಾಚಾರವೆಸಗಿಲ್ಲ. ತಾಂತ್ರಿಕ ಏನು ಹೇಳಿದ್ದ ಎಂಬುದನ್ನು ಲಾಲೂವಾಗೆ ಹೇಳಿದ್ದು, ಅವನು ನನಗೋಸ್ಕರ ಕೊಲೆ ಮಾಡುವುದಾಗಿ ಭರವಸೆ ನೀಡಿದ್ದ,’ ಎಂದು ಗಂಭೀರವಾಗಿ ಗಾಯಗೊಂಡ ಸೋನು ಟೈಮ್ಮ್ ಆಫ್ ಇಂಡಿಯಾಗೆ ತಿಳಿಸಿದ್ದಾನೆ. ಆದರೆ, ‘ಲಾಲುವಾ ಈಗಾಗಲೇ ಸತ್ತಿದ್ದು, ಮಾಡಿದ ಕೃತ್ಯವನ್ನು ಸೋನು ಈ ರೀತಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸತ್ತವರ ಮೇಲೆ ಎಲ್ಲ ಹೊಣೆ ಹೊರಿಸುವುದು ಸುಲಭ,’ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಮಂಗಳವಾರ ಮೃತ ದೇಹ ಸಿಕ್ಕಿದ ಬಾಲಕಿ ಠಾಕೂರ್ ಜಾತಿಗೆ ಸೇರಿದವಳಾಗಿದ್ದು, ಸೋನು ಮತ್ತು ಲಾಲುವಾ ದಲಿತರು. ಈ ಇಬ್ಬರಿಗೆ ಹಲ್ಲೆ ನಡೆಸಿದ ಅನೇಕರು ಸವರ್ಣೀಯರಾಗಿದ್ದರಿಂದ ಪ್ರಕರಣಕ್ಕೆ ದಲಿತ ಸ್ಪರ್ಶ ನೀಡಲಾಗುತ್ತಿದೆ. ಅಲ್ಲದೇ ‘ಸವರ್ಣೀಯರು ನಮ್ಮ ಮನೆಗೆ ಬೆಂಕಿ ಹಚ್ಚಿದ್ದು, ಹಳ್ಳಿಯಿಂದ ಹೊರ ಹಾಕಿದ್ದಾರೆ,’ ಎಂದೂ ಸೋನು ಪೋಷಕರು ಆರೋಪಿಸಿದ್ದಾರೆ.

ಲಾಲುವಾನನ್ನು ಕೊಲಗೈದ ನಂತರ ಹಳ್ಳಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಠಾಕೂರರು ಪ್ರಕರಣವನ್ನು ಖಂಡಿಸಿ, ರೈಲು ತಡೆದು, ಪ್ರತಿಭಟಿಸಿದ್ದಾರೆ. ಠಾಣೆಯಿಂದ ಲಾಲೂವನನ್ನು ಕರೆ ತಂದು, ಹೊಡೆದು ಕೊಂದ ಆರೋಪದ ಮೇಲೆ 100 ಮಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ನಾಲ್ವರನ್ನು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.

Write A Comment