ರಾಷ್ಟ್ರೀಯ

ರಾಹುಲ್ ಗಾಂಧಿಯ ಕಳಪೆ ಮಟ್ಟದ ಪ್ರಚಾರದ ಹೇಳಿಕೆ ಕಾಂಗ್ರೆಸ್ ಗೂ ಅನ್ವಯಿಸುತ್ತಾ?: ಅರುಣ್ ಜೇಟ್ಲಿ

Pinterest LinkedIn Tumblr

Arunನವದೆಹಲಿ: ಆರ್.ಎಸ್.ಎಸ್ ವಿರುದ್ಧ ರಾಹುಲ್ ಗಾಂಧಿ ನೀಡಿದ್ದ ‘ಕಳಪೆ ಮಟ್ಟದ ಪ್ರಚಾರ’ದ ಹೇಳಿಕೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದು ರಾಹುಲ್ ಗಾಂಧಿ ಹೇಳಿಕೆ ಕಾಂಗ್ರೆಸ್ ಗೂ ಅನ್ವಯಿಸುತ್ತಾ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಗೆ ಟ್ವಿಟರ್ ನಲ್ಲಿ ತಿರುಗೇಟು ನೀಡಿರುವ ಅರುಣ್ ಜೇಟ್ಲಿ, ರಾಹುಲ್ ಗಾಂಧಿ ಎಫ್ ಟಿಐಐ ನಲ್ಲಿ  ಕಳಪೆ ಮಟ್ಟದ ಪ್ರಚಾರದ ಬಗ್ಗೆ ನೀಡಿರುವ ಹೇಳಿಕೆ ಕಾಂಗ್ರೆಸ್ ಗೂ ಅನ್ವಯವಾಗುತ್ತದೆಯೇ ಎಂದು ಕೇಳಿದ್ದಾರೆ. ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದ್ದ ರಾಹುಲ್ ಗಾಂಧಿ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಉನ್ನತ ಅಧಿಕಾರಿಗಳ ಮಧ್ಯೆ ಕೂರಿಸಲಾಗುತ್ತಿದೆ. ಆರ್ ಎಸ್ಎಸ್ ಸಂಘಟನೆಯು ತನ್ನ ಶಕ್ತಿ ಬಳಸಿಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ಎಫ್ ಟಿಐಐ ಅಧ್ಯಕ್ಷ ಸ್ಥಾನಕ್ಕೆ ಗಜೇಂದ್ರ ಚೌಹಾಣ್ ರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಈ ವೇಳೆ ಆರ್ ಎಸ್ಎಸ್ ಸಂಘಟನೆಯು ತನ್ನ ಶಕ್ತಿ ಬಳಸಿಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದರು.

Write A Comment