ಪೇಶಾವರದ ದಾಳಿಯಲ್ಲಿ ಭಾರತದ ಪಾತ್ರವಿದೆ ಎನ್ನುವ ಮೂಲಕ ಭಾರತಕ್ಕೆ ‘ಉಗ್ರದೇಶ’ದ ಪಟ್ಟ ಕಟ್ಟಲು ಮುಂದಾಗಿದ್ದ ಪಾಪಿ ಪಾಕಿಸ್ತಾನ ಇದೀಗ ಭಾರತೀಯ ಗುಪ್ತಚರ ಇಲಾಖೆ ತಮ್ಮ ದೇಶದಲ್ಲಿ ಉಗ್ರ ಕೃತ್ಯ ನಡೆಸುತ್ತಿದೆ ಎಂದು ಆರೋಪ ಮಾಡಿದೆ.
ಹೌದು. ಭಾರತದ ಪ್ರಧಾನಿ ಮೋದಿ ಅವರ ಜತೆಗೆ ಕೈ ಕುಲುಕಿ ಭಯೋತ್ಪಾದನೆ ವಿರುದ್ದ ಹೋರಾಡುವ ಮಾತನಾಡಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಭಾರತೀಯ ಗುಪ್ತಚರ ಇಲಾಖೆ ಪಾಕ್ ನಲ್ಲಿ ನಡೆಸುತ್ತಿರುವ ಚಟುವಟಿಕೆ ಕುರಿತಾಗಿ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಭಾರತದ ‘ರಾ’ ಚಟುವಟಿಕೆ ಕುರಿತು ಪಾಕಿಸ್ತಾನ ಈಗಾಗಲೇ ಹಲವು ವಿದೇಶಿ ಮುಖಂಡರ ಜತೆ ಮಾತನಾಡಿದ್ದು ‘ರಾ’ ಪಾಕಿಸ್ತಾನದಲ್ಲಿ ನಡೆಸುತ್ತಿರುವ ಚಟುವಟಿಕೆ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ನವಾಜ್ ಷರೀಫ್ ಅವರೇ ತಿಳಿಸಿರುವುದಾಗಿ ವಿವರಿಸಿದರು.