ತಮಿಳುನಾಡು: ಮಾಧ್ಯಮಿಕ ಶಾಲಾ ಶಿಕ್ಷಕನೊಬ್ಬ ಪಾಠ ಹೇಳಿ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೋಷಕರ ದೂರಿನ ಮೇರೆಗೆ ಈಗ ಆತನನ್ನು ಬಂಧಿಸಲಾಗಿದೆ.
ತಮಿಳುನಾಡಿನ ಪೆರಂಬಲೂರು ಜಿಲ್ಲೆಯ ತಿರುವಲನದುರೈ ಗ್ರಾಮದಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೌಂದರ್ಯರಾಜನ್ ಎಂಬ ಈ ಕಾಮುಕ ಶಿಕ್ಷಕ ಆರನೇ ತರಗತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದನೆಂದು ಹೇಳಲಾಗಿದೆ.
ಪಾಠ ಹೇಳಿ ಕೊಡುವ ನೆಪದಲ್ಲಿ ತನ್ನ ಕೋಣೆಗೆ ಕರೆಸಿಕೊಳ್ಳುತ್ತಿದ್ದ ಸೌಂದರ್ಯ ರಾಜನ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಕ್ಕಳು ಪೋಷಕರ ಬಳಿ ಈ ವಿಷಯ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಪೋಷಕರು ಶಾಲೆಯ ಮುಖ್ಯ ಶಿಕ್ಷಕರಿಗೆ ವಿಷಯ ತಿಳಿಸಿದ್ದು, ಅವರು ನೀಡಿದ ದೂರಿನ ಮೇರೆಗೆ ಈಗ ಶಿಕ್ಷಕ ಸೌಂದರ್ಯ ರಾಜನ್ ನನ್ನು ಬಂಧಿಸಲಾಗಿದೆ.