ಆಕಾಶದಲ್ಲಿ ಇಂದು ಅಪರೂಪದ ವಿದ್ಯಾಮಾನ ಸಂಭವಿಸಲಿದ್ದು, ಇದನ್ನು ನೋಡುವುದನ್ನು ಇಂದು ತಪ್ಪಿಸಿಕೊಂಡರೆ ಮತ್ತೆ ನೋಡಲು ಮೂರು ವರ್ಷ ಕಾಯಬೇಕಾಗುತ್ತದೆ.
ಆಗಸದಲ್ಲಿ ಇಂದು ಪೂರ್ಣ ಚಂದ್ರ ಕಾಣಿಸಿಕೊಳ್ಳಲಿದ್ದು, ‘ಬ್ಲೂ ಮೂನ್’ ಎಂದು ಕರೆಯಲಾಗುವ ಇದನ್ನು ಭಾರತೀಯ ಕಾಲಮಾನ ಶುಕ್ರವಾರ ಸಂಜೆ 18:43 ರಿಂದ ವೀಕ್ಷಿಸಬಹುದಾಗಿದೆ ಎಂದು ಭಾರತೀಯ ಪ್ಲಾನೆಟರಿ ಸೊಸೈಟಿ ನಿರ್ದೇಶಕ ಶ್ರೀ ರಘುನಂದನ್ ಕುಮಾರ್ ತಿಳಿಸಿದ್ದಾರೆ.
ಜುಲೈ 2 ರಂದು ಪೂರ್ಣ ಚಂದ್ರ ಕಾಣಿಸಿದ್ದು, ಇಂದು ‘ಬ್ಲೂ ಮೂನ್’ ಕಂಡು ಬರಲಿದೆ. ಇದು ಮುಂದೆ 2 ಜನವರಿ 2018 ಹಾಗೂ 31 ಜನವರಿ 2018 ರಂದು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಮಳೆ ಮೋಡವಿಲ್ಲದಿದ್ದರೆ ‘ಬ್ಲೂ ಮೂನ್’ ಅನ್ನು ಮಿಸ್ ಮಾಡ್ದೇ ನೋಡಿ.