ಹೊಸದಿಲ್ಲಿ: ಎರಡು ದಿನಗಳ ಹಿಂದೆ ಗಲ್ಲು ಶಿಕ್ಷೆಗೆ ಗುರಿಯಾದ ಮುಂಬಯಿ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್ ಮೊಮೊನ್ ಪತ್ನಿ ರಹೀನಾ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡುವಂತೆ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್‌ಗೆ ಪಕ್ಷದ ನಾಯಕ ಮೊಹಮ್ಮದ್ ಫಾರೂಖ್ ಘೋಸಿ ಮಾಡಿರುವ ಮನವಿ ವಿವಾದಕ್ಕೆ ಕಾರಣವಾಗಿದೆ.
ಮುಲಾಯಂ ಸಿಂಗ್ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಮಹಾರಾಷ್ಟ್ರ ರಾಜ್ಯ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಫಾರೂಖ್ ಘೋಸಿ, ಪತ್ರ ಬರೆದಿರುವ ಸಮಯ ಸರಿ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ. ‘ಇಂಥ ಸಮಯದಲ್ಲಿ ಎಸ್ಪಿ ವರಿಷ್ಠರಿಗೆ ನಾನು ಇಂಥ ಪತ್ರ ಬರೆಯಬಾರದಿತ್ತು,’ ಎಂದಿದ್ದಾರೆ.
ಆದರೆ, ಯಾಕೂಬ್ ಪತ್ನಿಯನ್ನು ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕೆಂಬ ಬೇಡಿಕೆ ಸಮಂಜಸವಾದುದು ಎಂದು ತಮ್ಮ ನಿಲುವನ್ನು ಅವರನ್ನು
ಸಮರ್ಥಿಸಿಕೊಂಡಿದ್ದಾರೆ.
1993ರ ಮಾರ್ಚ್ 12ರಂದು ಮುಂಬಯಿನ 13 ಕಡೆ ಸ್ಫೋಟ ಸಂಭವಿಸಿ, 215 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದರು. ಪ್ರಕರಣದ ದೋಷಿ ಯಾಕೂಬ್ ಮೆಮೊನ್‌ನನ್ನು ನಾಗಪುರ ಕಾರಾಗೃಹದಲ್ಲಿ ಗುರುವಾರ ಬೆಳಗ್ಗೆ ಗಲ್ಲಿಗೇರಿಸಲಾಯಿತು.